*ದೇವರ ಫೋಟೋ ಮರಗಳ ಕೆಳಗೆ ಇಡುವ ಬದಲು ಶಾಸ್ತ್ರೋಕ್ತವಾಗಿ ವಿಸರ್ಜಿಸಿ: ವೀರೇಶ್ ಹಿರೇಮಠ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಚನ್ನಮ್ಮ ನಗರದಲ್ಲಿನ ಗಾರ್ಡನ್ ನಲ್ಲಿ ಹಿಂದೂ ದೇವರುಗಳ ಫೋಟೋಗಳನ್ನು ಶುಕ್ರವಾರ ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ವೀರೇಶ್ ಬಸಯ್ಯ ಹಿರೇಮಠ ಸಂಗ್ರಹಣೆ ಮಾಡಿ ಬಿಲ್ವ ಪತ್ರೆ ಗಿಡ ನೆಟ್ಟು ಪರಿಸರ ಕಾಳಜಿ ಮೆರೆದಿದ್ದಾರೆ.
ರಾಣಿ ಚನ್ನಮ್ಮ ನಗರದ ಹಿರಿಯರು ವೀರೇಶ ಬಸಯ್ಯ ಹಿರೇಮಠ ಅವರಿಗೆ ಕರೆ ಮಾಡಿ ಮುಕ್ಕಾದ ದೇವರ ಫೋಟೋ ಸಂಗ್ರಹ ಮಾಡಿಕೊಂಡು ಹೋಗಬೇಕು ಎಂದು ಮನವಿ ಮಾಡಿದಾಗ ಅಲ್ಲಿಗೆ ಹೋಗಿ ಸಂಗ್ರಹ ಮಾಡಿಕೊಂಡು ಸಸಿ ನೆಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ವೀರೇಶ ಬಸಯ್ಯ ಹಿರೇಮಠ ಅವರು, ಮನೆಯಲ್ಲಿ ಮುಕ್ಕಾದ ದೇವರ ಫೋಟೋಗಳನ್ನು ಗಿಡ, ಮರಗಳ ಕೆಳಗೆ ಇಡುವ ಬದಲು ಅವುಗಳನ್ನು ಶಾಸ್ತ್ರೋಕ್ತವಾಗಿ ವಿಸರ್ಜನೆ ಮಾಡಬೇಕು. ದೇವರ ಫೋಟೋಗಳಿಗೂ ಜೀವ ಇರುತ್ತವೆ ಎಂಬ ಕಲ್ಪನೆ ನಮ್ಮ ಹಿಂದೂ ಪುರಾಣಗಳಲ್ಲಿ ಇದೆ. ಹಾಗಾಗಿ ಎಲ್ಲರೂ ಇದನ್ನು ತಪ್ಪದೆ ಪಾಲಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಹಾವೀರ ಪರಮಾಜ, ಮಹಾವೀರ ಪಾಟೀಲ್, ಎಸ್.ಎಂ.ಖಾನಗೌಡರ, ಪಿ.ಜಿ.ಅಪ್ಪುಗೋಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.