Belagavi NewsBelgaum NewsKannada NewsKarnataka NewsLatest
*ಪತ್ನಿ ಜೊತೆ ಸಂಬಂಧ ಶಂಕೆ: ಸ್ನೇಹಿತನನ್ನೇ ತಲ್ವಾರ್ ನಿಂದ ಹೊಡೆದು ಕೊಂದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ತನ್ನ ಪತ್ನಿ ಜೊತೆ ಸ್ನೇಹಿತ ಅಕ್ರಮ ಸಂಬಂಧ ಹೊಂದಿರಬಹುದು ಎಂಬ ಅನುಮಾನಕ್ಕೆ ಆತನನ್ನು ತಲ್ವಾರ್ ನಿಂದ ಹೊಡೆದು ಕೊಂದಿರುವ ಘಟನೆ ಬೆಳಗವೈ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿದೆ.
ಬಸವರಾಜ್ ಬುಕನಟ್ಟಿ ಎಂಬಾತ ತನ್ನ ಸ್ನೇಹಿತ ಮಹಾಂತೇಶ್ ನನ್ನು ಕೊಲೈಗಿದಿದ್ದಾನೆ. ಪ್ರತಿದಿನ ಕುಡಿದು ಬಂದು ಪತ್ನಿಗೆ ಹಿಂಸಿಸುತ್ತಿದ್ದ. ತನ್ನ ಗೆಳೆಯನ ಜೊತೆ ನೀನು ಮಾತನಾಡುತ್ತಿರಬಹುದು. ಮೆಸೇಜ್ ಮಾಡುತ್ತಿರಬಹುದು ಎಂದು ಅನುಮಾನಿಸುತ್ತಿದ್ದ. ಅಷ್ಟೇ ಅಲ್ಲ ತನ್ನ ಸ್ನೇಹಿತ ಮಹಾಂತೇಶ್ ಗೂ ಇದೇ ರೀತಿ ಪ್ರಶ್ನಿಸಿ ಜಗಳವಾಡುತ್ತಿದ್ದನಂತೆ.
ಹೀಗೆ ಆರಂಭವಾದ ಜಗಳದ ವೇಳೆ ಬಸವರಾಜ್, ಮಹಾಂತೇಶ್ ನನ್ನು ತಲ್ವಾರ್ ನಿಂದ ಹೊಡೆದು ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.