*ಬೆಳಗಾವಿಯಿಂದ ಬೆಂಗಳೂರಿಗೆ ಮತ್ತೊಂದು ವಿಶೇಷ ರೈಲು*

ಪ್ರಗತಿವಾಹಿನಿ ಸುದ್ದಿ: ದಸರಾ ರಜೆಯ ಕಾರಣ ಬೆಳಗಾವಿ ಜನತೆಯ ವಿನಂತಿಯ ಮೇರೆಗೆ ಬೆಳಗಾವಿಯಿಂದ ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿಗೆ (SMVB) ವಿಶೇಷ ರೈಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಸಂಸದರಾದ ಜಗದೀಶ ಶೆಟ್ಟರ್ ಅವರು ತಿಳಿಸಿದರು.
ಅಕ್ಟೋಬರ್ 05, 2025 ರಂದು ಭಾನುವಾರ ಈ ವಿಶೇಷ ರೈಲು (ರೈಲು ಸಂಖ್ಯೆ: 06221) ಬೆಳಗಾವಿಯಿಂದ ರಾತ್ರಿ 08:55 ಗಂಟೆಗೆ ಹೊರಟು, ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ಅಕ್ಟೋಬರ್ 06 ರಂದು ಸೋಮವಾರ ಬೆಳಗ್ಗೆ 08:30 ತಲುಪುತ್ತದೆ ಹಾಗೂ (ರೈಲು ಸಂಖ್ಯೆ: 06222) ಅದೇ ದಿನ ರಾತ್ರಿ 09:00 ಗಂಟೆಗೆ SMVB ಇಂದ ಹೊರಟು, ಮರುದಿನ ಮಂಗಳವಾರ ಬೆಳಗ್ಗೆ 06:50 ಕ್ಕೆ ಬೆಳಗಾವಿ ತಲುಪುತ್ತದೆ. ಬೆಳಗಾವಿಯ ಜನತೆ ಈ ವಿಶೇಷ ರೈಲಿನ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿಸುತ್ತೇನೆ.
ಈ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಕ್ಕಾಗಿ ರೈಲ್ವೆ ಅಧಿಕಾರಿಗಳಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.