
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸುಳಗಾ ಗ್ರಾಮದಲ್ಲಿ ಸೋಮವಾರ ಸನ್ಮಾನಿಸಲಾಯಿತು.
ಇದೇ ವೇಳೆ ಬೆಳಗಾವಿ ಜಿಲ್ಲೆಯ ಮಲಪ್ರಭಾ ಹಾಗೂ ಘಟಪ್ರಭಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿಗಮದ (ಕಾಡಾ) ಅಧ್ಯಕ್ಷರಾಗಿ ಆಯ್ಕೆಯಾಗಿರುವ ಯುವರಾಜ ಕದಂ ಅವರನ್ನೂ ಸಹ ಗ್ರಾಮಸ್ಥರು ಸನ್ಮಾನಿಸಿದರು.
ಈ ವೇಳೆ ಬಾಗಣ್ಣ ನರೋಟಿ, ಬಾಳು ಪಾಟೀಲ, ಯಲ್ಲಪ್ಪ ಕಲಕಾಂಬ್ಕರ್, ಕಾಶೀರಾಮ್ ಪಾಟೀಲ, ಯಲ್ಲಪ್ಪ ಪಾಟೀಲ, ಮಾರುತಿ ಪಾಟೀಲ, ವರ್ಷಾ ಸಾವಗಾಂವ್ಕರ್, ಮಲ್ಲಪ್ಪ ಸುಳಗೇಕರ್, ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರು, ಪಿಕೆಪಿಎಸ್ ಸೊಸೈಟಿಯ ನಿರ್ದೇಶಕರು ಮುಂತಾದವರು ಉಪಸ್ಥಿತರಿದ್ದರು.