Kannada NewsKarnataka NewsLatest

*BREAKING: ತನ್ನ ತಾಯಿಯನ್ನು ಅವಾಚ್ಯವಾಗಿ ನಿಂದಿಸುತ್ತಿದ್ದ ವ್ಯಕ್ತಿಯನ್ನು ರಾಡ್ ನಿಂದ ಹೊಡೆದು ಕೊಂದ ಮಗ*

ಪ್ರಗತಿವಾಹಿನಿ ಸುದ್ದಿ: ತನ್ನ ತಾಯಿಯನ್ನು ಅವಾಚ್ಯವಾಗಿ ನಿಂದಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಗ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ನದೆದಿದೆ.

ಜ್ಞಾನಭಾರತಿ ಠಾಣೆ ವ್ಯಾಪ್ತಿಯ ಉಳ್ಳಾಲ ಉಪನಗರದ ರಾಮಚಂದ್ರಪ್ಪ ಲೇಔಟ್ ನಲ್ಲಿ ಈ ಘಟನೆ ನಡೆದಿದೆ. ಅವಿನಾಶ್ (36) ಕೊಲೆಯಾದ ವ್ಯಕ್ತಿ. ಕಾರ್ತಿಕ್ ಕೊಲೆಗೈದಿರುವ ಆರೋಪಿ.

ಕಾರ್ತಿಕ್ ಹಾಗೂ ಆತನ ತಾಯಿ ಬಾಡಿಇಗೆ ಮನೆಯಲ್ಲಿ ವಾಸವಾಗಿದ್ದರು. ಮತ್ತೊಂದು ಮನೆಯಲ್ಲಿ ಆಟೋ ಚಾಲಕ ಅವಿನಾಶ್ ಕೂಡ ಬಾಡಿಗೆಗೆ ವಾಸವಾಗಿದ್ದ. ನಿನ್ನೆ ರಾತ್ರಿ ಕುಡಿದು ಬಂದಿದ್ದ ಅವಿನಾಶ್ ಕಾರ್ತಿಕ್ ತಾಯಿಯನ್ನು ಅವಾಚ್ಯವಾಗಿ ನಿಂದಿಸಿ ಬೈಯ್ದಿದ್ದಾನೆ. ಇದರಿಂದ ಕಾರ್ತಿಕ್ ತಾಯಿ ಕಾರ್ತಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದರು.

ನೇರವಾಗಿ ಮನೆಗೆ ಬಂದ ಮಗ ಕಾರ್ತಿಕ್ ಕಬ್ಬಿಣದ ರಾಡ್ ನಿಂದ ಅವಿನಾಶ್ ಗೆ ಹೊಡೆದಿದ್ದಾನೆ. ಗಂಭೀರವಾಗಿ ಹಲ್ಲೆಗೊಳಗಾದ ಅವಿನಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಹತ್ಯೆ ಬಳಿಕ ಕಾರ್ತಿಕ್ ಪೊಲೀಸರಿಗೆ ತಾನೇ ಕರೆ ಮಾಡಿ ಮಾಹಿತಿ ನೀಡಿ, ಶರಣಾಗಿದ್ದಾನೆ.


Related Articles

Back to top button