Kannada NewsKarnataka NewsLatest

*ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 1 ಕೋಟಿ ಹಣ ಜಪ್ತಿ*

ಪ್ರಗತಿವಾಹಿನಿ ಸುದ್ದಿ: ಖಾಸಗಿ ಬಸ್ ನಲ್ಲಿ ದಾಖಲೆಗಳಿಲ್ಲದ 1 ಕೋಟಿ ರೂಪಾಯಿ ಹಣವನ್ನು ಸಾಗಿಸುತ್ತಿದ್ದ ವೇಳೆ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಮಾಜಾಳಿಯಲ್ಲಿ ನಡೆದಿದೆ.

ಗೋವಾದಿಂದ ಬೆಂಗಳೂರಿಗೆ ಖಾಸಗಿ ಬಸ್ ನಲ್ಲಿ 1 ಕೋಟಿ ರೂಪಾಯಿ ಹಣವನ್ನು ಬ್ಯಾಗ್ ನಲ್ಲಿಟ್ಟು ಸಾಗಾಟ ಮಾಡಲಾಗುತ್ತಿತ್ತು. ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಬಸ್ ತಪಾಸಣೆ ನಡೆಸಿದ ವೇಳೆ ಇಬ್ಬರ ಬಳಿ ಇದ್ದ ಬ್ಯಾಗ್ ನಲ್ಲಿ ಹಣ ಪತ್ತೆಯಾಗಿದೆ.

ಕಲ್ಪೇಶಕುಮಾರ್ ಹಾಗೂ ಬೊಂಬ್ರಾ ರಾಮ್ ಎಂಬುವವರ ಬ್ಯಾಗ್ ನಲ್ಲಿ 1 ಕೋಟಿ ಹಣ ಪತ್ತೆಯಾಗಿದೆ. ಪರಿಶೀಲಿಸಿದಾಗ ಯಾವುದೇ ದಾಖಲೆಗಳು ಇರಲಿಲ್ಲ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಿ ವಿಚಹರಣೆ ನಡೆಸಿದಾಗ ಈ ಹಣ Mxon ಎಲೆಕ್ಟ್ರಿಕ್ ಹಾರ್ಡ್ ವೇರ್ ಕಂಪನಿಗೆ ಸೇರಿದ್ದಾಗಿದ್ದು, ತೆರಿಗೆ ತಪ್ಪಿಸಲು ಬ್ಯಾಗ್ ನಲ್ಲಿ ಹಣವನ್ನು ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ. ಸದ್ಯ ಹಣವನ್ನು ಜಪ್ತಿ ಮಾಡಿರುವ ಪೊಲೀಸರು ಐಟಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button