
ಪ್ರಗತಿವಾಹಿನಿ ಸುದ್ದಿ: ಮರಕ್ಕೆ ಗೂಡ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಗೊಂದಿ ಚಟ್ಟಿಹಳ್ಳಿಯಲ್ಲಿ ಈ ದುರಂತ ಸಂಭವಿಸಿದೆ. ಚಾಲಕ ನಿದ್ದೆ ಮಂಪರಿನಲ್ಲಿ ಗೂಡ್ಸ್ ಓಡಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಬಾಳೆಹೊನ್ನೂರು ಬಳಿ ಕಾರ್ಪೆಂಟ್ ಕೆಲಸ ಮುಗಿಸಿ ಗೂಡ್ಸ್ ವಾಹನದಲ್ಲಿ ವಾಪಾಸ್ ಆಗುತ್ತಿದ್ದಾಗ ಇಂದು ಬೆಳಿಗ್ಗೆ ಈ ಅಪಘಾತ ಸಂಭವಿಸಿದೆ.
ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಅಸಾದುಲ್ಲಾ, ಸಾದಿಕ್, ಫೈರೋಜ್ ಮೃತ ದುರ್ದೈವಿಗಳು. ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.


