*ಕಲ್ಲು ತೂರಾಟದಲ್ಲಿ ಆರು ಪೊಲೀಸರಿಗೆ ಗಾಯ: ಎಸ್. ಪಿ. ಡಾ. ಭೀಮಾಶಂಕರ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರೈತರು ಹೆದ್ದಾರಿ ಬಂದ್ ಮಾಡಿದ ವೇಳೆ ಪೊಲೀಸರು ಬಲ ಪ್ರಯೋಗ ಮಾಡಿಲ್ಲ. ಕಲ್ಲು ತೂರಾಟ ಮಾಡಲು ಒಳ ಸಂಚು ಮಾಡಿದ ಕಿಡಿಗೇಡಿಗಳನ್ನು ಬಂಧಿಸುತ್ತೇವೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಬೀಮಾಶಂಕರ ಗುಳೇದ್ ಅವರು ತಿಳಿಸಿದರು.
ಹತ್ತರಗಿ ಟೋಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಸ್ತೆ ತೆರವು ಸಂದರ್ಭದಲ್ಲಿ ಅಪಾರ್ಥವಾಗಿ ಕಲ್ಲು ತೂರಾಟವಾಗಿದೆ. ಕಲ್ಲು ತೂರಾಟದಲ್ಲಿ ಆರು ಜನ ಪೊಲೀಸರಿಗೆ ಗಾಯವಾಗಿದೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಲ್ಲು ತೂರಾಟ ಸಂದರ್ಭದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಪೊಲೀಸರು ತಾಳ್ಮೆ ವಹಿಸಿ ಸ್ಥಳದಿಂದ ಹಿಂದೆ ಬಂದಿದ್ರು. ಬಲ ಪ್ರಯೋಗ ಮಾಡಿಲ್ಲ. ನಮ್ಮ ಮನವಿ ಹಿನ್ನೆಲೆಯಲ್ಲಿ ಹೋರಾಟ ವಾಪಸ್ ಪಡೆಯಲಾಗಿದೆ ಎಂದು ತಿಳಿಸಿದರು.
ರೈತರು ಶಾಂತ ರೀತಿಯಲ್ಲಿ ಹೋರಾಟ ಮಾಡಲಿ. ಪ್ರಚೋದನೆಗೆ ಒಳಗಾಗಿ ಕಲ್ಲು ತೂರಾಟ ಮಾಡಬೇಡಿ. ಹತ್ತರಗಿ ಟೋಲ್ ಬಳಿ 50 ಸಿಸಿಟಿವಿ ಹಾಕಲಾಗಿದೆ. ಒಳ ಸಂಚು ಮಾಡಿದ ಕಿಡಿಗೇಡಿಗಳನ್ನು ಬಂಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.



