Belagavi NewsBelgaum NewsEducationKannada NewsKarnataka News

*ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ದೊಡ್ಡದು: ಥಾವರ್ ಚಂದ್ ಗೆಹ್ಲೋಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಷ್ಟ್ರ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ಮಹತ್ವದ್ದು, ಭಾರತ ಸದ್ಯ ಅತಿ ಹೆಚ್ಚು ಯುವ ಸಮೂಹ ಹೊಂದಿದ ದೇಶವಾಗಿದೆ. ಯುವ ಪೀಳಿಗೆ ಕೇವಲ ಉದ್ಯೋಗ ನಿರೀಕ್ಷಿಸದೆ ಉದ್ಯೋಗ ಸೃಷ್ಟಿಸುವ ಮಟ್ಟಕ್ಕೆ ಬೆಳವಣಿಗೆ ಗುರಿ ಹೊಂದಬೇಕು ಎಂದು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ತಿಳಿಸಿದರು.

ಸುವರ್ಣ ವಿಧಾನ ಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಮಂಗಳವಾರ (ನ.25) ನಡೆದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ 14ನೇ ವಾರ್ಷಿಕ ಘಟಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ರಾಣೆ ಚನ್ನಮ ಅವರ ಹೆಸರಿನಲ್ಲಿ ಸ್ಥಾಪನೆಗೊಂಡ ವಿಶ್ವ ವಿದ್ಯಾಲಯ ಅವರ ತ್ಯಾಗ ಬಲಿದಾನದ ಸ್ಮರಣಾರ್ಥವಾಗಿದೆ. ವಿದ್ಯಾರ್ಥಿಗಳು ಪದವಿ ನಂತರ ಉನ್ನತ ಸ್ಥಾನ ಪಡೆದು ಭಾರತದ ಏಳಿಗೆಯಲ್ಲಿ ಪಾಲ್ಗೊಳ್ಳಬೇಕು. ಭಾರತ ಈಗ ಕೃಷಿ, ವಿಜ್ಞಾನ, ತಂತ್ರಜ್ಞಾನ ಶಿಕ್ಷಣ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಮುಂದುವರೆದ ರಾಷ್ಟ್ರವಾಗಿದೆ ಎಂದರು.

ಪದವಿ ಬಳಿಕ ಪ್ರಮಾಣ ಪತ್ರ ಪಡೆಯುವುದು ಮಾತ್ರವಲ್ಲದೇ ಕಲಿತ ಜ್ಞಾನದಿಂದ ಬಡ ಮತ್ತು ಮದ್ಯಮ ಜನರ ಜೀವನಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ದೊಡ್ಡ ದೊಡ್ಡ ಕಂಪನಿಗಳಿಗೆ ಸೇರುವುದಕ್ಕಿಂತ ಸ್ವಯಂ ಉದ್ಯೋಗ ಸೃಷ್ಟಿಯ ಮೂಲಕ ಉತ್ತಮ ವೃತ್ತಿಜೀವನ ಕಟ್ಟಿಕೊಳ್ಳಬೇಕು.

Home add -Advt

ಬಲಿಷ್ಠ ಭಾರತ ನಿರ್ಮಾಣದಲ್ಲಿ ವಿಧ್ಯಾರ್ಥಿಗಳು, ಯುವಕರ ಪಾತ್ರ ಬಹು ಮುಖ್ಯವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವಕರು ಕೈ ಜೋಡಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಅವರು ಸಲಹೆ ನೀಡಿದರು.

ಘಟಕೋತ್ಸವ ಭಾಷಣ ಮಾಡಿದ ಇಸ್ರೋ ಮಾಜಿ ಅಧ್ಯಕ್ಷರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಜಿ.ಎಂ ಮೋದಿ ವಿಜ್ಞಾನ ಪ್ರಶಸ್ತಿ ಪುರಸ್ಕೃತರಾದ ಎ.ಎಸ್. ಕಿರಣ್ ಕುಮಾರ ವಿಶ್ವವಿದ್ಯಾನಿಲಯಗಳು/ಶಿಕ್ಷಣ ಸಂಸ್ಥೆಗಳು ಈ ಪ್ರದೇಶದ ಒಟ್ಟಾರೆ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಅವುಗಳು ನಿರಂತರ ಸಮಸ್ಯೆಗಳನ್ನು ಗುರುತಿಸಿ ತಜ್ಞರನ್ನು ಒಳಗೊಂಡ ವ್ಯವಸ್ಥಿತ ಅಧ್ಯಯನಗಳನ್ನು ನಡೆಸುವ ಮೂಲಕ ಅವುಗಳನ್ನು ಪರಿಹರಿಸಬೇಕು ಮತ್ತು ಸುಸ್ಥಿರ ಪರಿಹಾರಗಳನ್ನು ಕಂಡುಹಿಡಿಯಬೇಕು ಎಂದರು.

ಭಾರತವು ನವೀನ ಮತ್ತು ವೆಚ್ಚ-ಪರಿಣಾಮಕಾರಿ ವಿಧಾನಗಳನ್ನು ಬಳಸಿಕೊಂಡು ಚಂದ್ರನ ಮೇಲೆ ಅನ್ವೇಷಣೆ ಮತ್ತು ಮೃದು ಇಳಿಯುವಿಕೆಯಂತಹ ಗಮನಾರ್ಹ ಅನ್ಯಲೋಕದ ಚಟುವಟಿಕೆಗಳನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಅದರ ಪ್ರಯತ್ನಗಳು ಅಂತರರಾಷ್ಟ್ರೀಯ ಗಮನ ಮತ್ತು ಮೆಚ್ಚುಗೆಯನ್ನು ಸೆಳೆದಿವೆ.

ಮಾನವ ಬಾಹ್ಯಾಕಾಶ ಹಾರಾಟ ಚಟುವಟಿಕೆಗಳನ್ನು ಮತ್ತಷ್ಟು ಮುಂದುವರಿಸಲು ಮತ್ತು ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲು ಮತ್ತು ಚಂದ್ರನ ಮೇಲೆ ಮನುಷ್ಯರನ್ನು ಇಳಿಸಲು ಯೋಚಿಸುತ್ತಿದೆ ಎಂದು ಎ.ಎಸ್. ಕಿರಣ್ ಕುಮಾರ ಹೇಳಿದರು.

ಕುಲಪತಿಗಳಾದ ಪ್ರೊ. ಸಿ.ಎಂ ತ್ಯಾಗರಾಜ, ಕುಲಸಚಿವ ಸಂತೋಷ ಕಾಮಗೌಡರ, ಮೌಲ್ಯಮಾಪನ ಕುಲಸಚಿವ ಪ್ರೊ. ಡಿ.ಎನ್ ಪಾಟೀಲ, ಹಣಕಾಸು ಅಧಿಕಾರಿ ಎಂ. ಎ ಸ್ವಪ್ನ, ಬೋಧಕ, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.

ಗೌರವ ಡಾಕ್ಟರೇಟ್ ಪ್ರಶಸ್ತಿ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 14ನೇ ಘಟಕೋತ್ಸವದ ಸಂದರ್ಭದಲ್ಲಿ ಪರಿಸರ ಮತ್ತು ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿವಾಜಿ ಛತ್ತು ಕಾಗಣಿಕರ್, ಶಿಕ್ಷಣ ಸಮಾಜ ಸೇವೆ, ಪರಂಪರೆ ಸಂರಕ್ಷಣೆ ಕ್ಷೇತ್ರದಲ್ಲಿ ವಿನೋದ ಸುರೇಂದ್ರ ದೊಡ್ಡಣ್ಣವರ ಹಾಗೂ ಸಾಹಿತ್ಯ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಬಸವರಾಜ ಯಆಗಾರ ಅವರಿಗೆ ಗೌರವ ಡಾಕ್ಟರೇಟ ಪದವಿಯನ್ನು ನೀಡಲಾಗುವುದು.

ಸ್ವರ್ಣ ಪದಕ ವಿಜೇತ ಸ್ನಾತಕ, ಸ್ನಾತಕೋತ್ತರ ವಿದ್ಯಾರ್ಥಿಗಳ ವಿವರ

ಸ್ನಾತಕ ವಿಭಾಗದಲ್ಲ: ವಾಣಿಜ್ಯ ವಿಭಾದಲ್ಲಿ ಗೋಕಾಕನ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ರೂಪಾ ನಾಯಕ ಹಾಗೂ ವಿಜಯಮರದ ಬಿ.ಎಲ್.ಡಿ.ಇ ಸಂಸ್ಥೆಯ ಅಂಬಿಕಾ ಮಳೆದ, ವಿಜ್ಞಾನ ವಿಭಾಗದಲ್ಲಿ ಬೆಳಗಾವಿ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ನಿಕಿತಾ ಪಸಾರೆ, ಕಲಾ ವಿಭಾಗದಲ್ಲಿ ಚಿಕ್ಕೋಡಿ ತಾಲೂಕಾ ಶಿಕ್ಷಣ ಸಂಸ್ಥೆಯ ರಿಯಾ ಕುಲ್ಕರ್ಣಿ, ಬಿ.ಬಿ.ಎ ವಿಭಾಗದಲ್ಲಿ ವಿಜಯಪುರದ ಚೇತನಾ ಬಿ.ಬಿ.ಎ ಶಿಕ್ಷಣ ಸಂಸ್ಥೆಯ ನಂದೀಶ ಬಳೂತಿ, ಬಿ.ಸಿ.ಎ ವಿಭಾಗದಲ್ಲಿ ನಿಡಸೋಸಿಯ ಎಸ್.ಎನ್.ಜೆ.ಪಿ.ಎಸ್.ಎನ್.ಎಮ್.ಎಸ್ ಸಂಸ್ಥೆಯ ಪಲ್ಲವಿ ನಿಕ್ಕಮ, ಬೃಚುಲರ್ ಆಫ್ ಸೈನ್ಸ್ ಇನ ಶ್ಯುಗರ್ ಸೈನ್ಸ ಆಯಂಡ ಟೆಕ್ನಾಲಾಜಿ ವಿಭಾಗದಲ್ಲಿ ಬೆಳಾಗವಿಯ ಎಸ್. ನಿಜಲಿಂಗಪ್ಪ ಶೃುಗರ್ ಇನ್ಸಿಟ್ಯುಟ್‌ನ ರಾಹುಲ ಸುರಾಗಾಂವಿ, ದೈಹಿಕ ಶಿಕ್ಷಣ ವಿಭಾಗದಲ್ಲಿ ಶ್ರೀ ಶಿವಯೋಗಿ ಸಂಗಮಾರ್ಯ ವಿದ್ಯಾ ಸಂಸ್ಥೆಯ ವೀರೇಶ ಚಿನ್ನಾಪೂರ, ಸಾಮಾಜ ಕಾರ್ಯ ವಿಭಾಗದಲ್ಲಿ ಬಾಗಲಕೋಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂಜಲಿ ಮಂದಿ ಇವರುಗಳಿಗೆ ಸ್ವರ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸ್ನಾತಕೋತ್ತರ ವಿಭಾಗದಲ್ಲಿ ಕನ್ನಡ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪೂಜಾ ಕಾಂಬಳೆ ಹಾಗೂ ಮಲ್ಲಕಾರ್ಜುನ ಪೂಜಾರಿ, ಇಂಗ್ಲೀಷ್ ವಿಭಾಗದಲ್ಲಿ ಲೋಕಾಪುರದ ಜಾಧವಣ ಶಿಕ್ಷಣ ಸಂಸ್ಥೆಯ ವಿನಾಯಕ ಘುಳಪ್ಪನ್ನವರ, ಮರಾಠಿ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರೇಷ್ಮಾ ಕಾಂಬಳೆ, ಅರ್ಥಶಾಸ್ತ್ರ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಜ್ಯೋತಿ ದಸ್ತಿಕೊಪ್ಪ, ಇತಿಹಾಸ ಮತ್ತು ಪ್ರಾಥ್ಯ ವಸ್ತುಶಾಸ್ತ್ರ ವಿಭಾಗದಲ್ಲ ಶಿಕ್ಷಣ ಪ್ರಸಾರಕ ಮಂಡಳದ ತುಶಾರ ಮಜಲ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಂಜುನಾಥ ನಿಲುಗಲ್ಲ, ರಾಜ್ಯ ಶಾಸ್ತ್ರ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕವಿತಾ ಹೊಸಮನಿ, ಸಮಾಜಶಾಸ್ತ್ರ ವಿಭಾಗದಲ್ಲಿ ರೂಪಾ ಕಾರಜೋಳ, ಸಮಾಜ ಕಾರ್ಯ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂದ್ಯಾ ಕೋಲ್ಕರ್, ಅಪರಾಧ ಶಾಸ್ತ್ರ ಮತ್ತು ನ್ಯಾಯ ವಿಜ್ಞಾನ ವಿಭಾಗದಲ್ಲ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಚೈತ್ರಾ ಪಟ್ಟಣಶೆಟ್ಟಿ, ಸಸ್ಯಶಾಸ್ತ್ರ ವಿಭಾಗದ ಚಿಕ್ಕೋಡಿಯ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಯಶೋಧಾ ಕಂಬಾರ, ರಸಾಯನ ಶಾಸ್ತ್ರ ವಿಭಾಗದಲ್ಲಿ ಸೌತ ಕೊಂಕಣ ಶಿಕ್ಷಣ ಸಂಸ್ಥೆಯ ಸಹನಾ ತರಗರ, ಗಣಕ ವಿಜ್ಞಾನ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶ್ರೇಣಿಕಾ ಪವಾರ, ಭೂಗೋಳ ಶಾಸ್ತ್ರ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಿರಣ ಮಂಟೂರ, ಗಣಿತ ಶಾಸ್ತ್ರದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಿನಾಲ್ ಬಡಿಗೇರ, ಭೌತಶಾಸ್ತ್ರ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಂತವ್ವ ಸಂಗನ್ನವರ, ಪ್ರಾಣಿ ಶಾಸ್ತ್ರ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪೂಜಾ ಗಡವೆ, ಗ್ರಂಥಾಲಯ ವಿಭಾಗದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸುಪ್ರಿಯಾ ಕಾಂಬಳಿ, ವಾಣಿಜ್ಯ ಶಾಸ್ತ್ರದಲ್ಲಿ ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಅಮೃತಾ ಕಾಂಬಳೆ, ಶಿಕ್ಷಣ ಶಾಸ್ತ್ರದಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಸಂತ ಮೇಲಿನಮನಿ, ದೈಹಿಕ ಶಿಕ್ಷಣ ವಿಭಾಗದಲ್ಲಿ ತನುಜಾ ಬಿ, ಅಲ್ಲೋಹಾಲಿಕ ಟೆಕ್ನಾಲಾಜಿ ವಿಭಾಗದಲ್ಲಿ ಎಸ್.ನಿಜಲಿಂಗಪ್ಪ ಶುಗರ ಇನ್ಸಿಟಿಟ್ಯೂಟನ್ ಅನುಶ್ರೀ, ಚನ್ನಗಿರಿ, ಬೈಯೋ-ಕೆಮಿಸ್ಟ್ರಿ ವಿಭಾಗದಲ್ಲಿ ಸೌಥ ಕೊಂಕಣ ಶಿಕ್ಷಣ ಸಂಸ್ಥೆಯ ಗಾಯತ್ರಿ ಕುಲಕಣಿ, ಎನವಿರಾನಮೆಂಟಲ್ ಸೈನ್ಸ್ ವಿಭಾಗದಲ್ಲಿ ಸೌಥ ಕೊಂಕಣ ಶಿಕ್ಷಣ ಸಂಸ್ಥೆಯ ಅಪರ್ಣಾ ಪಾಟೀಲ, ಮೈಕ್ರೋ ಬೈಯಾಲಾಜಿ ವಿಭಾಗದಲ್ಲಿ ಸೌಥ ಕೊಂಕಣ ಶಿಕ್ಷಣ ಸಂಸ್ಥೆಯ ಅನುರಾಧ ಮಹಾನ ಇವರುಗಳಿಗೆ ಸ್ವರ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಷಯವಾರು ಅತೀ ಹೆಚ್ಚು ಅಂಕಗಳಿಸಿ ಸ್ವರ್ಣ ಪದಕ ಪಡೆದ ವಿದ್ಯಾರ್ಥಿಗಳ ವಿವರ

ಕಲಾ ವಿಭಾಗದಲ್ಲಿ ಇಂಗ್ಲೀಷ್ ವಿಷಯದಲ್ಲಿ ಮುಶ್ಯಾಬ್ಬರಿನ ಕಡಲಗಿ, ಕನ್ನಡ ವಿಷಯದಲ್ಲಿ ಶೋಭಾ ಗಿರಿಮಲ್ಲನ್ನವರ, ಸಮಾಜ ವಿಜ್ಞಾನ ವಿಷಯದಲ್ಲಿ ವಾಣಿಶ್ರೀ ಮುಂಜಿ, ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಕಾಸ್ಟ ಆಂಡ್ ಟ್ಯಾಕ್ಸಿಶನ್ ವಿಷಯದಲ್ಲಿ ಪ್ರತೀಕ್ಷಾ ನೂಲಿ ಸ್ವರ್ಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Related Articles

Back to top button