*ವಿಜಯೇಂದ್ರ ಕಳುಹಿಸಿದ್ದಕ್ಕೇ ದೆಹಲಿಗೆ ಹೋಗಿದ್ದೆವು ಎಂದ ರಮೇಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಕುರುಬ ಸಮುದಾಯದ ಎಸ್ಟಿ ಮೀಸಲಾತಿ ಹೋರಾಟ ವಿಚಾರವಾಗಿ ಮಾತನಾಡಿದ ಶಾಸಕ ರಮೇಶ್ ಜಾರಕಿಹೊಳಿ, ಕುರುಬರು ಸೇರಿದಂತೆ ಉಪ್ಪಾರ ಸಮುದಾಯ ಸುಣಗಾರರನ್ನೂ ಸೇರಿಸಲಿ. ನಾನು ಬೇಡ ಎನ್ನುವುದಿಲ್ಲ ಆದರೆ ಪರ್ಸಂಟೇಜ್ ಜಾಸ್ತಿ ಮಾಡಲಿ ಎಂದರು.
ಬೆಳಗಾವಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಓಬಿಸಿ ತೆಗೆದು ಪರ್ಸಂಟೇಜ್ ಹೆಚ್ಚು ಮಾಡಲಿ ಅಂತಾ ಮನವಿ ಮಾಡುತ್ತೆನೆ ಎಂದು ಹೇಳಿದರು.
ಬಿಜೆಪಿ ರೆಬೆಲ್ಸ್ ಟೀಮ್ ದೆಹಲಿ ಭೇಟಿಯ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ವಿಜಯೇಂದ್ರ ಅವರೇ ನಮ್ಮನ್ನು ಕಳಿಸಿದ್ದು. ವಿಜಯೇಂದ್ರ ನಾನೇ ಕಳ್ಸಿದೀನಿ ಅಂತಾ ಹೇಳಿದ್ದ. ಅವರೇ ಕಳ್ಸಿದ್ದಕ್ಕೆ ನಾವು ಹೋಗಿದ್ವಿ ಅಂತಾ ಟಾಂಗ್ ನೀಡಿದರು.
ದೆಹಲಿಯಲ್ಲಿ ವರಿಷ್ಠರ ಭೇಟಿಯಾಗಿ ಏನೋ ಚರ್ಚೆ ಆಗಿದೆ, ಯಾರ ಜೊತೆಗೆ ಆಗಿದೆ ಅನ್ನೋದು ಬಹಿರಂಗವಾಗಿ ಹೇಳಲ್ಲ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ನಲ್ಲಿ ಖುರ್ಚಿ ಕಿತ್ತಾಟ ಅವರ ಪಕ್ಷದ ಆಂತರಿಕ ವಿಚಾರ. ಸಿದ್ದರಾಮಯ್ಯ ಮುಂದುವರೆಯುತ್ತಾರೋ ಇಲ್ಲವೋ ಗೊತ್ತಿಲ್ಲ. ಸತೀಶ್ ಅವರಾದ್ರು ಸಿಎಂ ಆಗಲಿ, ಪರಮೇಶ್ವರ, ಖರ್ಗೆ ಅವರಾಗಲಿ. ಅದು ಅವರ ಪಕ್ಷದ ನಿರ್ಧಾರ ಎಂದರು.
ಐದು ವರ್ಷ ಅವರಿಗೆ ಜನ ದೊಡ್ಡ ಬಹುಮತ ಕೊಟ್ಟಿದ್ದಾರೆ. ಸರ್ಕಾರ ಉಳಿಯಬೇಕು ಎನ್ನುವುದು ನಮ್ಮ ವಿಚಾರ. ಜನ ಬೆಂಬಲ ಕೊಟ್ಟಿದ್ದಾರೆ ಒಳ್ಳೆ ಕೆಲಸ ಮಾಡಬೇಕು ಎಂದರು.
ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ವಿಚಾರವಾಗಿ ಬಿಜೆಪಿ ಪಕ್ಷದಿಂದ ಹೋರಾಟ ಮಾಡ್ತಿದ್ದಾರೆ. ಆರ್.ಅಶೋಕ ಅವರು ಎಲ್ಲಿ ಕರೆಯುತ್ತಾರೆ ಹೋಗುತ್ತೇವೆ. ಬಿಜೆಪಿಯಲ್ಲಿ ಎಷ್ಟೇ ಜಗಳ ಬಂದ್ರೂ ಪಕ್ಷದ ವಿಚಾರ ಬಂದಾಗ ಎಲ್ಲರೂ ಒಂದೇ. ಪಕ್ಷದ ಚೌಕಟ್ಟಿನಲ್ಲಿ ಎಲ್ಲರೂ ಒಂದೇ ಎಂದು ಹೇಳಿದರು.



