Belagavi NewsBelgaum NewsKannada NewsKarnataka NewsPolitics

*ಮುತ್ಯಾನಟ್ಟಿ ಗ್ರಾಮದ ಜನರಿಗೆ ಗುಡ್ ನ್ಯೂಸ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮುತ್ಯಾನಟ್ಟಿ ಭಾಗದ ಜನರಿಗೆ ಬಹಳಷ್ಟು ಕುಡಿಯುವ ನೀರಿನ ಸಮಸ್ಯೆ ಇತ್ತು. 24×7 ಗಂಟೆಗಳ ನಿರಂತರವಾಗಿ ಮನೆ ಮನೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸುಮಾರು 5 ಲಕ್ಷ ವೆಚ್ಚದಲ್ಲಿ ನೀರಿನ ಸಂಗ್ರಹಣ ಘಟಕ ನಿರ್ಮಿಸಲಾಗಿಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ಹೇಳಿದರು.

ಮುತ್ಯಾನಟ್ಟಿ ವಲಯದಲ್ಲಿ (ಬುಧವಾರ ಡಿ.10) ಹೊಸದಾಗಿ ನಿರ್ಮಿಸಿಲಾದ 5 ಲಕ್ಷ ಲೀಟರ್ ಸಾಮರ್ಥ್ಯದ ಮೇಲ್ಮಟ್ಟದ ಜಲಸಂಗ್ರಹಗಾರ ಉದ್ಘಾಟಿಸಿ ಅವರು ಮಾತನಾಡಿದರು.

ನೀರು ಸಂಗ್ರಹಣ ನಿರ್ಮಾಣದಿಂದ ವಾರ್ಡ್ ಸಂಖ್ಯೆ 55ರ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗಿದೆ. ಕೆ.ಯು.ಐ.ಡಿ.ಎಫ್.ಸಿ, ಮಹಾನಗರ ಪಾಲಿಕೆ, ವಿಶ್ವಬ್ಯಾಂಕ್ ಕೆಯುಡಬ್ಲ್ಯೂಎಸ್ಎಂಪಿ 24×7 ನಿರಂತರ ನೀರು ಸರಬರಾಜು ಯೋಜನೆ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.

ಯಾವುದೇ ವಿದ್ಯುತ್ ಸಂಪರ್ಕ ಇಲ್ಲದೆ ಮೇಲ್ಮಟ್ಟದ ನೀರು ಸಂಗ್ರಹಣ ಘಟಕದಿಂದ ಇಳಿಜಾರು ಮೂಲಕ ನೀರು ಸರಬರಾಜು ಮಾಡಲಾಗುವುದು. ಸುಮಾರು 4 ಸಾವಿರ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರ ಕಲ್ಪಿಸಿದಂತಾಗಿದೆ. ಬೆಳಗಾವಿ ಜಿಲ್ಲೆಗೆ ನಗರಾಭಿವೃದ್ಧಿ ಇಲಾಖೆಯಿಂದ 100 ಕೋಟಿ ಅನುದಾನ ನೀಡಲಾಗಿದ್ದು, ಅದರಲ್ಲಿ ಸುಮಾರು 25 ಕೋಟಿ ಮುಖ್ಯಮಂತ್ರಿಗಳ ಅನುದಾನ ಸೇರ್ಪಡೆಯಿದೆ ಎಂದು ಮಾಹಿತಿ ನೀಡಿದರು.  

Home add -Advt

ಬೆಳಗಾವಿಯ ಬೇರೆಬೇರೆ ಭಾಗಗಳಲ್ಲಿ ನೀರು ಸರಬರಾಜು ಕೊರತೆ ನೀಗಿಸಲು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಇದೇ ರೀತಿಯಲ್ಲಿ ನೀರು ಸಂಗ್ರಹಣ ಘಟಕ ನಿರ್ಮಿಸಲು ಯೋಜನೆಗಳನ್ನು ರೂಪಿಸಲಾಗಿದೆ ಸಚಿವ ಭೈರತಿ ಸುರೇಶ್ ಹೇಳಿದರು.

ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ (ರಾಜು) ಸೇಠ್ ಮಾತನಾಡಿ ಸುಮಾರು ವರ್ಷಗಳ ಹಿಂದೆ ಮುತ್ಯಾನಟ್ಟಿ ಗ್ರಾಮದಲ್ಲಿ ನೀರಿನ ಕೊರತೆ ಬಹಳಷ್ಟಿದ್ದು ಕೆಲವು ಕಡೆ ಬೋರ್ವೆಲ್ ಗಳು ಮಾತ್ರ ಇದ್ದವು. ಇದೆಲ್ಲವುಗಳನ್ನು ಗಮನಿಸಿ ಈ ಭಾಗದ ಜಾರಿಗೆ ನೀರಿನ ಕೊರತೆಯಾಗದಂತೆ 24*7 ನೀರು ಸರಬರಾಜು ಮಾಡಲು 5 ಲಕ್ಷ ವೆಚ್ಚದಲ್ಲಿ ಜಲ ಸಂಗ್ರಹಣ ಘಟಕ ನಿರ್ಮಿಸಲಾಗಿದೆ ಎಂದರು.

ಅದೇ ರೀತಿಯಲ್ಲಿ ರಸ್ತೆ, ಚರಂಡಿ ನಿರ್ಮಾಣ ಸೇರಿದಂತೆ ಅವಶ್ಯಕ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಗ್ರಾಮದಲ್ಲಿ ಎಲ್ಲೆಡೆ  ಉತ್ತಮ ರಸ್ತೆ, ವಿದ್ಯುತ್ ದೀಪ ಸೇರಿಯಂತೆ ಇನ್ನೂ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಸೇಠ್ ಹೇಳಿದರು.

ಕೆ.ಯು.ಐ.ಡಿ.ಎಫ್.ಸಿ ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿ ರಾಜ್ಯದ ಮುಖ್ಯಮಂತ್ರಿಗಳ ವಿವಿಧ ಜನಪರ ಮೂಲಭೂತ ಸೌಕರ್ಯಗಳ ಯೋಜನೆಗಳಲ್ಲಿ ಇದು ಕೂಡ ಒದಗಿದ್ದು, ಇದೇ ರೀತಿಯಲ್ಲಿ ನೀರು ಸರಬರಾಜಿಗೆ ಅಗತ್ಯ ಸ್ಥಳಗಳಲ್ಲಿ ಜಲ ಸಂಗ್ರಹಗಾರ ಘಟಕಗಳನ್ನು ನಿರ್ಮಿಸಲಾಗುವುದು ಎಂದರು.

ಮಹಾಪೌರ ಮಂಗೇಶ್ ಪವಾರ್, ಉಪ ಮಹಾಪೌರ ವಾಣಿ ಜೋಶಿ, ಮಹಾನಗರ ಪಾಲಿಕೆ ಆಯುಕ್ತ ಎಂ. ಕಾರ್ತಿಕ್, ಕೆ.ಯು.ಐ.ಡಿ.ಎಫ್.ಸಿ ಮುಖ್ಯ ಅಭಿಯಂತರ ನಂದೀಶ್ ಜಿ.ಆರ್ ಸೇರಿದಂತೆ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

Related Articles

Back to top button