Belagavi NewsBelgaum NewsKannada NewsKarnataka NewsNationalPolitics

*ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಅಲೋಕ ಕುಮಾರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಪೊಲೀಸ್ ಮಹಾನಿರ್ದೇಶಕ ಅಲೋಕ ಕುಮಾರ್ ರವರ ನೇತೃತ್ವದಲ್ಲಿ “ಕಾರಾಗೃಹ ಸುಧಾರಣಾ ಸಂಕಲ್ಪ ಅಭಿಯಾನದಡಿ” ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಮುಖ್ಯ ಅಧೀಕ್ಷಕರ ನೇತೃತ್ವದಲ್ಲಿ ಸಂಸ್ಥೆಯ ಕರ್ತವ್ಯನಿರತ ಅಧಿಕಾರಿ, ಸಿಬ್ಬಂದಿಗಳು ತಪಾಸಣೆ ಕೈಗೊಂಡಾಗ ನಿಷೇಧಿತ ವಸ್ತುಗಳಾದ ರೆಡ್‌ಮಿ ಕಂಪನಿಯ 1 ಆಂಡ್ರಾಯ್ಡ್ ಮೊಬೈಲ್, 1 ಸ್ಯಾಮ್‌ಸಂಗ್ ಬೇಸಿಕ್ ಹ್ಯಾಂಡಸೆಟ್, ಒಡೆದು ಹೋಗಿರುವ 1 ಅಡಾಪ್ಟರ್, 3 ಯು.ಎಸ್.ಬಿ ಚಾರ್ಜಿಂಗ್ ಕೇಬಲ್‌ಗಳು ದೊರೆತಿವೆ.

ಸದರಿ ನಿಷೇದಿತ ವಸ್ತುಗಳನ್ನು ಸಾಗಿಸಿದವರು ಇದಕ್ಕೆ ಸಹಕರಿಸಿದವರು ಹಾಗೂ ನಿಷೇಧಿತ ವಸ್ತುಗಳನ್ನು ಕಾರಾಗೃಹದಲ್ಲಿ ಉಪಯೋಗಿಸಿದವರ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಅಧಿನಿಯಮ 2022, ಕಲಂ 42 ರನ್ವಯ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸಲು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ಸಂಖ್ಯೆ: 240/2025 ರಲ್ಲಿ ದಿನಾಂಕ: 23-12-2025 ರಂದು ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಪೊಲೀಸ್ ಮಹಾನಿರ್ದೇಶಕ ಅಲೋಕ ಕುಮಾರ್ ರವರ ಅನಿರೀಕ್ಷಿತ ತಪಾಸಣೆಯಲ್ಲಿ ಭಾಗಿಯಾದ ಅಧಿಕಾರಿ, ಸಿಬ್ಬಂದಿಗಳಿಗೆ 5,000 ರೂಗಳ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿರುತ್ತಾರೆ. ದಿನಾಂಕ: 11-12-2025 ರಿಂದ ದಿನಾಂಕ: 24-12-2025 ರವರೆಗೆ ಒಟ್ಟು 03 ಎಫ್.ಐ.ಆರ್ ಗಳು ದಾಖಲಾಗಿವೆ ಎಂದು ಬೆಳಗಾವಿ ಕೇಂದ್ರ ಕಾರಗೃಹ ಮುಖ್ಯ ಅಧೀಕ್ಷಕರು (ಪ್ರ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://pragativahini.com/legal-fight-for-deputy-commissioner-roshan-minister-satish

Home add -Advt

Related Articles

Back to top button