CrimeKannada NewsKarnataka NewsLatest
*ವಿಚ್ಛೇದನದ ಬಳಿಕ ಪತಿಯ ಸ್ನೇಹಿತನನ್ನೇ ಮದುವೆಯಾದ ಮಹಿಳೆ: ರೊಚ್ಚಿಗೆದ್ದ ಮಾಜಿ ಗಂಡನಿಂದ ಗೆಳೆಯನ ಮೇಲೆ ಮಾರಣಾಂತಿಕ ಹಲ್ಲೆ*

ಪ್ರಗತಿವಾಹಿನಿ ಸುದ್ದಿ: ಪತಿ ವಿಚ್ಛೇಧನ ನೀಡಿದ್ದಕ್ಕೆ ಮಹಿಳೆಯೊಬ್ಬರು ಆತನ ಸ್ನೇಹಿತನನ್ನೇ ಮದುವೆಯಾಗಿದ್ದು, ಇದರಿಂದ ಸಿಟ್ಟಿಗೆದ್ದ ಮಾಜಿ ಪತಿ, ತನ್ನ ಸ್ನೇಹಿತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ವಿಕ್ರಂ ಎಂಬಾತ ತನ್ನ ಸ್ನೇಹಿತ ವಿನೋಧ್ ಮೇಲೆ ಹಲ್ಲೆ ನಡೆಸಿದ್ದಾನೆ. ಶಿವಮೊಗ್ಗದ ಪೆಟ್ರೋಲ್ ಬಂಕ್ ಬಳಿ ಈ ಘಟನೆ ನಡೆದಿದೆ. ವಿಕ್ರಂ ಎರಡು ತಿಂಗಳ ಹಿಂದೆ ತನ್ನ ಪತ್ನ್ ಛಾಯಾಳಿಗೆ ವಿಚ್ಛೇದನ ನೀಡಿದ್ದ. ವಿಕ್ರಂ ಹಾಗೂ ಲಾರಿ ಚಾಲಕ ವಿನೋದ್ ಆತ್ಮೀಯ ಸ್ನೇಹಿತರಾಗಿದ್ದರು. ವಿಕ್ರಂ ವಿಚ್ಛೇಧನ ನೀಡಿದ ಬಳಿಕ ಛಾಯಾ ವಿನೋದ್ ನನ್ನು ವಿವಾಹವಾಗಿದ್ದಾಳೆ.
ಇದನ್ನು ಸಹಿಸಿಕೊಳ್ಳಲಾಗದೇ ರೊಚ್ಚಿಗೆದ್ದ ವಿಕ್ರಂ, ವಿನೋದ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಅಗಿ ಗಾಯಗೊಂಡ ವಿನೋದ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಪತ್ತೆಯಾಗಿರುವ ವಿಕ್ರಂ ಗಾಗಿ ಹುಡುಕಾಟ ನಡೆಸಿದ್ದಾರೆ.




