Kannada NewsKarnataka NewsLatest
*ಹೋಟೆಲ್ ನಲ್ಲಿ ಬೆಂಕಿ ಅವಘಡ: ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಕೃಷ್ಣ ಪ್ಯಾಲೇಸ್ ಬೆಂಕಿಗಾಹುತಿ*

ಪ್ರಗತಿವಾಹಿನಿ ಸುದ್ದಿ: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಹೋಟೆಲ್ ಸುಟ್ತು ಕರಕಲಾಗಿರುವ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಸೋಲಾಪುರ ರಸ್ತೆಯಲ್ಲಿರುವ ಬಿಎಲ್ ಇಡಿ ವಿಶ್ವ ವಿದ್ಯಾಲಯ ಸಮೀಪದಲ್ಲಿರುವ ಕೃಷ್ಣ ಹೋಟೆಲ್ ನಲ್ಲಿ ಇಂದು ನಸುಕಿನಜಾವ ಬೆಂಕಿ ಅವಘಡ ಸಂಭವಿಸಿದೆ. ಹೋಟೆಲ್ ನ ಮುಂಭಾಗದಲ್ಲಿ ಕಾಣಿಸಿಕೊಂಡ ಬೆಂಕಿ ಕೆಲ ಸಮಯದಲ್ಲೇ ಇಡೀ ಹೋಟೆಲ್ ಗೆ ವ್ಯಾಪಿಸಿದೆ.
ಬೆಂಕಿಯ ಕೆನ್ನಾಲಿಕೆಗೆ ಇಡೀ ಹೋಟೆಲ್ ಧಗಧಗನೆ ಹೊತ್ತಿ ಉರಿದಿದೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಹೋಟೆಲ್ ಗೆ ಬರುವಷ್ಟರಲ್ಲಿ ಹೋಟೆಲ್ ನಲ್ಲಿದ್ದ ವಸ್ತುಗಳು, ಪೀಠೋಪಕರಣ, ಕಟ್ಟಡ ಸಂಪೂರ್ಣ ಸುಟ್ಟು ಕರಕಲಾಗಿದೆ. ಗ್ಯಾಸ್ ಸಿಲಿಂಡರ್ ಗಳೂ ಸ್ಫೋಟಗೊಂಡಿವೆ. ಸದ್ಯ ಬೆಂಕಿ ನಂದಿಸಲಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.



