
ಪ್ರಗತಿವಾಹಿನಿ ಸುದ್ದಿ: ಇಂಟರ್ ಓಷ್ಯಾನ್ ರೈಲು ಹಳಿತಪ್ಪಿದ ಪರಿಣಾಮ 13 ಜನರು ಸಾವನ್ನಪ್ಪಿದ್ದಾರೆ. 98 ಜನರು ಗಾಯಗೊಂಡಿರುವ ಘಟನೆ ನಡೆದಿದೆ.
ದಕ್ಷಿಣ ಮೆಕ್ಸಿಕೊದ ಓಕ್ಸಾಕದಲ್ಲಿ ಈ ಘಟನೆ ನಡೆದಿದೆ. ಇಂಟರ್ ಓಷ್ಯಾನ್ ರೈಲು ಹಳಿತಪ್ಪಿ ಈ ದುರಂತ ಸಂಭವಿಸಿದ್ದು, ಸಿಬ್ಬಂದಿ ಸೇರಿದಂತೆ 250 ಜನರಿದ್ದ ರೈಲು ಹಳಿ ತಪ್ಪಿದ್ದು 13 ಜನರು ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತಕ್ಕೀಡಾದ ರೈಲು 2023ರಲ್ಲಿ ಉದ್ಘಾಟನೆಯಾಗಿತ್ತು.


