
ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೋರ್ವ ರಿವಾಲ್ವರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಕಲಬುರಗಿ ನಗರದ ಶಿವಶಕ್ತಿ ನಗರದಲ್ಲಿ ಈ ಘಟನೆ ನಡೆದಿದೆ. ಖಂಡುರಾವ್ ದವಳಜಿ (36) ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಕಂಟ್ರಿ ಮೇಡ್ ಪಿಸ್ತೂಲ್ ನಿಂದ ಗುಂಡು ಹಾರಿದ್ಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಘಟನಾ ಸ್ಥಳಕ್ಕೆ ಕಲಬುರಗಿ ಚೌಕ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖಂಡುರಾವ್ ಪತ್ನಿ ಹೇಳುವ ಪ್ರಕಾರ ತನ್ನ ಪತಿ ಕೆಲ ದಿನಗಳಿಂದ ಸೈಕೋ ರೀತಿ ವರ್ತಿಸುತ್ತಿದ್ದ. ತನಗೆ ಹಾಗೂ ಮಕ್ಕಳಿಗೆ ಚಿತ್ರಹಿಂಸೆ ನೀಡುತ್ತಿದ್ದ. ನಮ್ಮನ್ನು ಸಾಯಿಸಬೇಕು ಎಂದು ಪ್ಲಾಅನ್ ಮಾಡಿದ್ದಾಗಿ ಹೇಳಿ ಹೆದರಿಸುತ್ತಿದ್ದ. ಅಲ್ಲದೇ ನಿನ್ನೆ ರಾತ್ರಿ ಹತ್ತು ನಿದ್ರೆ ಮಾತ್ರೆಗಳನ್ನು ತಂದು ಮಕ್ಕಳಿಗೆ ಕೊಟ್ಟಿದ್ದಾನೆ. ರೂಮಿನ ಬಾಗಿಲು ತೆರೆಯಲು ಬಿಡುತ್ತಿರಲಿಲ್ಲ. ರಿವಾಲ್ವರ್ ತೆಗೆದುಕೊಂಡು ಸಾಯಿಸುವುದಾಗಿ ಹೆದರಿಸುತ್ತಿದ್ದ. ಪತಿಯ ಹುಚ್ಚಾಟಕ್ಕೆ ಹೇಗೋ ತಪ್ಪಿಸಿಕೊಂಡು ನಾನು ಮಕ್ಕಳನ್ನು ಮನೆಯಿಂದ ಹೊರ ಕರೆದುಕೊಂಡು ಬಂದು ಬೇರೆಯವರ ಮನೆಗೆ ಹೋಗಿ ರಕ್ಷಿಸಿಕೊಂಡಿದ್ದೆವು. ಈಗ ಪತಿ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಗಮಿಸುವಷ್ಟರಲ್ಲಿ ಪತಿ ಇಲ್ಲ ಎಂದು ಕಣೀರಿಟ್ಟಿದ್ದಾರೆ.




