Belagavi NewsBelgaum NewsCrimeKannada NewsKarnataka NewsNational
*ಸಿಬ್ಬಂದಿ ಬೇಜವಾಬ್ದಾರಿಯ ಪರಿಣಾಮ ಜೈಲಿನಲ್ಲಿ ನಿಷೇಧಿತ ವಸ್ತು ಎಸೆಯಲಾಗಿದೆ: ಡಿಐಜಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಹಿಂಡಲಗಾ ಜೈಲಿನ ಆವರಣದೊಳಗೆ ನಿಷೇಧಿತ ವಸ್ತುಗಳು ಎಸೆದಿರುವ ಸಿಸಿಟಿವಿ ದೃಶ್ಯಗಳು ವೈರಲ್ ಆಗಿದ್ದು, ಪ್ರಕರಣದ ಬಗ್ಗೆ ಬಂಧಿಖಾನೆ ಉತ್ತರ ವಲಯ ಡಿಐಜಿ ಟಿ.ಪಿ.ಶೇಷ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ತಮ್ಮ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು ಒಂದು ತಿಂಗಳ ಹಿಂದಿನದ್ದು. ಈ ಬಗ್ಗೆ ಈಗಾಗಲೇ ಕೇಸ್ ಕೂಡ ಮಾಡಿದ್ದೇವೆ. ಈ ಬಗ್ಗೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಿಸಿಟಿವಿ ದೃಶ್ಯ ನಮ್ಮವರೇ ಕೊಟ್ಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಡಿಜಿಯವರು ತನಿಖೆ ಮಾಡಿ ವರದಿ ನೀಡುವಂತೆ ಹೇಳಿದ್ದಾರೆ. ಸಿಐಎಸ್‌ಎಫ್ ಸಿಬ್ಬಂದಿಗಳದ್ದು ಮೇಲ್ನೋಟಕ್ಕೆ ಬೇಜವಾಬ್ದಾರಿ ಕಂಡು ಬರ್ತಿದೆ. ಡಿಜಿಯವರ ಸೂಚನೆ ಮೇರೆಗೆ ಮೊನ್ನೆ ದಿನ ಜೈಲು ತಪಾಸಣೆ ಮಾಡಿದ್ದೇವೆ. ಈ ವೇಳೆ 12 ಮೊಬೈಲ್, ಒಂದು ಚಾರ್ಜರ್, ನಾಲ್ಕು ಸಿಮ್ ಪತ್ತೆಯಾಗಿವೆ ಎಂದರು.



