Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಮಟಕಾ ಅಡ್ಡೆ ಮೇಲೆ ಪೊಲೀಸರ ದಾಳಿ; ಓರ್ವ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಮಟಕಾ ಅಡ್ಡೆಯ ಮೇಲೆ ದಾಳಿ ನಡೆಸಿರುವ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿಯ ವಿಜಯನಗರ ರಸ್ತೆಯಲ್ಲಿ ಸಾರ್ವಜನಿಕ ಸ್ಥಳವನ್ನು ಸ್ವಂತ ಲಾಭಕ್ಕಾಗಿ ಕಲ್ಯಾಣ ಮಟಕಾ ಎಂಬ ಹೆಸರಲ್ಲಿ ಮಟಕಾ ದಂಧೆ ನಡೆಸಿ, ಸಾರ್ವಜನಿಕರಿಂದ ಹಣ ಪಡೆದು ಓಸಿ ಜುಗಾರ್ ಆಟದಲ್ಲಿ ಜನರನ್ನು ತೊಡಗಿಸುತ್ತಿದ್ದ ಬಗ್ಗೆ ಕ್ಯಾಂಪ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಕ್ಯಾಂ ಠಾಣೆಯ ಪಿಎಸ್ ಐ ರುಕ್ಮಿಣಿ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದರು. ಈ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ನಾರಾಯಣ ಬವಖನ್ನಾ ಸಾವಂತ್ ಬಂಧಿತ ಆರೋಪಿ. ಈತ ಬೆಳಗಾವಿಯ ಹಿಂದಲಗಾದ ಪೈಪ್ ಲೈನ್ ರೀಡ್ ನಿವಾಸಿ ಎಂದು ತಿಳಿದುಬಂದಿದೆ.

ಬಂಧಿತನಿಂದ 3,146 ರೂಪಾಯಿ ನಗದು ಹಣ ಹಾಗೂ ಓಸಿ ಚೀಟಿಗಳನ್ನು ಜಪ್ತಿ ಮಾಡಲಾಗಿದೆ.

Home add -Advt


Related Articles

Back to top button