
ಪ್ರಗತಿವಾಹಿನಿ ಸುದ್ದಿ: ಉತ್ತರ ಗೋವಾದಲ್ಲಿ ಇಬ್ಬರು ವಿದೇಶಿ ಮಹಿಳೆಯರನ್ನು ಕತ್ತು ಸೀಳಿ ಪರಿಚಿತನೇ ಕೊಲೆ ಮಾಡಿರುವ ಘಟನೆ ನಡೆದಿದೆ.
ರಷ್ಯಾ ಮೂಲದ ಅಲೆಕ್ಸಿ ಲಿಯೋನಲ್ ಎಂಬಾತ ತನ್ನ ಸ್ನೇಹಿತೆಯರಿಬ್ಬರನ್ನೂ ಒಂದು ದಿನದ ಅಂತರದಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಉತ್ತರ ಗೋವಾದ ಅರಾಂಬೋಲ್ ಹಾಗೂ ಮೊರ್ಜಿಮ್ ಗ್ರಾಮದಲ್ಲಿ ವಾಸವಾಗಿದ್ದ ಎಲೆನಾ ವನೀತಾ (37) ಹಾಗೂ ಎಲೆನಾ ಕಸ್ತನೋವಾ (37) ಕೊಲೆಯಾದ ಮಹಿಳೆಯರು.
ಜನವರಿ 14ರಂದು ಆರೋಪಿ ತನ್ನ ಸ್ನೇಹಿತೆ ಮೊರ್ಜಿಮ್ ನಲ್ಲಿ ವಾಸವಿದ್ದ ಎಲೆನಾ ವನಿವಾ ಅವರನ್ನು ಕತ್ತು ಸೋಳಿ ಕೊಲೆಗೈದಿದ್ದಾನೆ. ಬಳಿಕ ಜನವರಿ 15ರಂದು ಅಲ್ಲಿಂದ 8 ಕಿ.ಮೀ ದೂರದಲ್ಲಿರುವ ತನ್ನ ಮತ್ತೋರ್ವ ಸ್ನೇಹಿತೆ ಎಲೆನಾ ಕಸ್ತನೋವಾಳನ್ನು ಭೇಟಿಯಾಗಲೆಂದು ಆಕೆ ಮನೆಗೆ ಹೋದವನು ಆಕೆಯನ್ನು ಹಗ್ಗದಿಂದ ಕಟ್ಟಿ ಹಾಕಿ ಕತ್ತು ಸೀಳಿ ಕೊಲೆಗೈದು ಎಸ್ಕೇಪ್ ಆಗಿದ್ದಾನೆ. ಮರುದಿನ ಬೆಳಿಕ್ಕೆ ಮನೆಯ ಮಾಲೀಕರು ಗಮನಿಸಿದಾಗಲೇ ಕೊಲೆಯಾಗಿರುವುದು ಬೆಳಕಿಗೆ ಬಂದಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.
ಗೋವಾ ಪೊಲೀಸರು ಆರೋಪಿ ಅಲೆಕ್ಸಿ ಲಿಯೊನೊವ್ ನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.



