Kannada NewsKarnataka NewsLatest

*ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಶಿವಲಿಂಗ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನದ ವೇಳೆ ಹಲುವು ವಸ್ತುಗಳು ಪತ್ತೆಯಾಗಿದ್ದು,  ಉತ್ಪನನ ಸ್ಥಳದ ಪಕ್ಕದ ಗೋಡೆಯಲ್ಲಿ ಶಿವಲಿಂಗ ಪತ್ತೆಯಾಗಿದೆ. 

ಜ.17 ನಿನ್ನೆ ಶಿವಲಿಂಗದ ಮಾದರಿಯ ಅವಶೇಷ ಪತ್ತೆಯಾಗಿತ್ತು. ಇಂದು ಜನತಾ ಶಿಕ್ಷಣ ಸಂಸ್ಥೆ ಕಟ್ಟಡ ತೆರವು ಮಾಡಲಾಯಿತು. ಈ ವೇಳೆ ಕೋಟೆಯ ಗೋಡೆಯಲ್ಲಿ ಶಿವಲಿಂಗ ಪತ್ತೆಯಾಗಿದೆ.

ಶಿವಲಿಂಗ ಪುರಾತನ ಕಾಲದ್ದಾಗಿದ್ದು, ಇದು ಹಿತ್ತಳೆಯದ್ದಾ? ಕಂಚಿನದ್ದಾ? ತಾಮ್ರದ್ದಾ? ಅಥವಾ ಬೆಳ್ಳಿಯದ್ದಾ? ಯಾವ ಲೋಹದ್ದು ಎಂಬ ಕುತೂಹಲ ಮೂಡಿದೆ. ಈ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ.

ಶಿವಲಿಂಗ ಪತ್ತೆ ಬೆನ್ನಲ್ಲೇ ಉತ್ಖನನ ಸ್ಥಳದಲ್ಲಿ ಇಂದು ಬೃಹತ್ ಹಾವು ಓಡಾಡಿದ್ದು, ಉತ್ಖನನ ಕಾರ್ಯ ನಡೆಸುತ್ತಿರುವ ಕಾರ್ಮಿಕರಲ್ಲಿಯೂ ಆತಂಕ ಮೂಡಿಸಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Home add -Advt

Related Articles

Back to top button