
ಸಂಸದ ಬಸವರಾಜ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿ: ಬೇಡ್ತಿ ವರದಾ ನದಿ ಜೋಡಣೆಯ ಅಗತ್ಯತೆ ಕುರಿತು ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿಗಳ ನೇತೃತ್ವದಲ್ಲಿ ನಿಯೋಗ ತೆಗೆದುಕೊಂಡು ಸಿಎಂ, ಡಿಸಿಎಂ ಭೇಟಿ ಮಾಡುವುದು, ಕೇಂದ್ರ ಜಲಶಕ್ತಿ ಸಚಿವರು ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ಮತ್ತು ರಾಜ್ಯಕ್ಕೂ ನಿಯೋಗ ತೆಗೆದುಕೊಂಡ ಹೋಗಿ ಒತ್ತಡ ಮತ್ತು ಮನವರಿಕೆ ಮಾಡುವ ಅವಶ್ಯಕತೆ ಇದೆ. ಡಿಪಿಆರ್ ನಲ್ಲಿ ಹಾವೇರಿ ಜಿಲ್ಲೆಯಲ್ಲಿ ನೀರು ಸಂಗ್ರಹಿಸುವ ಪ್ರತ್ಯೇಕ ವ್ಯವಸ್ಥೆ ಆಗಬೇಕು. ಅದನ್ನು ಸೇರಿಸುವಂತೆ ಈಗಾಗಲೇ ಬರೆದಿದ್ದೇನೆ ಅದನ್ನು ಒತ್ತಾಯ ಮಾಡಬೇಕು.
ಶಾಸಕರು, ಸಂಸದರು, ಸ್ವಾಮೀಜಿಗಳು ರೈತ ಸಂಘಟನೆ ಮುಖಂಡರು ಸಿಎಂ, ಡಿಸಿಎಂ ಭೇಟಿ ಮಾಡುವುದು, ಕೇಂದ್ರ ಜಲಶಕ್ತಿ ಸಚಿವರು ಹಾಗೂ ರಾಜ್ಯವನ್ನು ಪ್ರತಿನಿಧಿಸುವ ಸಚಿವರನ್ನು ಭೇಟಿ ಮಾಡಿ ಬೆಡ್ತಿ ವರದಾ ನದಿ ಜೋಡಣೆಯ ಕಾರ್ಯಗತ ಗೊಳಿಸಲು ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಮಾರ್ಚ್ ಏಪ್ರಿಲ್ ನಲ್ಲಿ ಪ್ರತಿ ಗ್ರಾಮ ದಲ್ಲಿ ಜನ ಜಾಗೃತಿ ಸಭೆ ಮಾಡಿ ಮನವರಿಕೆ ಮಾಡಿಕೊಡಲಾಗುವುದು. ತುಂಗಭದ್ರಾ ವರದಾ ನದಿ ಪಾತ್ರದಲ್ಲಿ ಇರುವುದರಿಂದ ಕುಡಿಯುವ ನೀರಿನ ದೃಷ್ಟಿಯಿಂದ ಅವಶ್ಯಕತೆಯಿದೆ. ಹಾವೇರಿ, ಹಾನಗಲ್ ಬ್ಯಾಡಗಿ, ಶಿಗ್ಗಾವಿ, ಸವಣೂರು ಬಂಕಾಪುರ ಎಲ್ಲ ಪಟ್ಟಣಗಳಿಗೂ ಕುಡಿಯುವ ನೀರು ಅವಶ್ಯಕತೆ ಇದೆ . ಎಲ್ಲ ಕಡೆ ಜನ ಜಾಗೃತಿ ಮಾಡುತ್ತೇವೆ. ಇದನ್ನು ಗಮನಿಸಲು ತಜ್ಞರ ಸಮಿತಿ ಮತ್ತು ಲೀಗಲ್ ಟೀಮ ಮಾಡಿವುದು. ಹುಕ್ಕೇರಿ ಸದಾಶಿವ ಸ್ಮಾಮೀಜಿ ಪರಮಪೂಜ್ಯರ ನೇತೃತ್ವದಲ್ಲಿ ನಿಯೋಗ ತೆಗೆದುಕೊಂಡು ಹೋಗಲು ತೀರ್ಮಾನ ಮಾಡಲಾಗಿದೆ ಎಂದು ಹೇಳಿದರು.
ಬಯಲು ಸಿಮೆಯ ಜಿಲ್ಲೆಗಳ ಸಹಕಾರ ಪಡೆಯುತ್ತೀರಾ ಎನ್ನುವ ಪ್ರಶ್ನೆಗೆ ಆ ಭಾಗದ ಶಾಸಕರು ಮತ್ತು ಸಂಸತ್ ಸದಸ್ಯರ ಬೆಂಬಲ ಪಡೆದು ದೊಡ್ಡ ಜನಾಂದೋಲನ ಮಾಡುತ್ತೇವೆ. ನಮ್ಮ ಹೋರಾಟ ಯಾರ ವಿರುದ್ದವೂ ಅಲ್ಲ ನಮ್ಮ ಬದುಕುವ ಹಕ್ಕಿಗಾಗಿ ಹೋರಾಟ ಯಾರ ವಿರುದ್ದವೂ ಅಲ್ಲ. ಅಗತ್ಯ ಬಿದ್ದರೆ ಹಾವೇರಿಯಲ್ಲಿ ದೊಡ್ಡ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.




