
ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕೇಂದ್ರ ಸರಕಾರದ 2025 -26ನೇ ಸಾಲಿನ ಬಜೆಟ್ ಮಂಡನೆಯಾಗುತ್ತಿದ್ದು, ಹಲವು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸುತ್ತಿದ್ದಾರೆ. ದೇಶದ 7 ನಗರಗಳನ್ನು ಜೋಡಿಸುವ ಹೈ ಸ್ಪೀಡ್ ರೈಲ್ವೆ ಕಾರಿಡಾರ್ ಘೋಷಿಸಿದ್ದಾರೆ. ದೆಹಲಿ -ವಾರಣಾಸಿ -ಮುಂಬೈ -ಪುಣೆ- ಹೈದರಾಬಾದ್ – ಬೆಂಗಳೂರು – ಚೆನ್ನೈ ನಗರಗಳನ್ನು ಹೈಸ್ಪೀಡ್ ರೈಲ್ವೆ ಜೋಡಿಸಲಿದೆ. ಇದು ಈ ಪ್ರಮುಖ ನಗರಗಳ ಬೆಳವಣಿಗೆಗೆ ಪ್ರಮುಖ ಕಾರಣವಾಗುವ ನಿರೀಕ್ಷೆ ಮೂಡಿಸಿದೆ.
20 ರಾಷ್ಟ್ರೀಯ ಜಲಮಾರ್ಗಗಳನ್ನು ಸಹ ಅವರು ಘೋಷಿಸಿದ್ದಾರೆ. ದೇಶದಲ್ಲಿ 15 ಸಾವಿರ ಪ್ರೌಢ ಶಾಲೆ ಮತ್ತು 500 ಕಾಲೇಜುಗಳ ಸ್ಥಾಪನೆ ಘೋಷಿಸಿದ್ದಾರೆ. ಇಂಡಸ್ಟ್ರಿ ಮತ್ತು ಲಾಜಿಸ್ಟಿಕ್ ಕಾರಿಡಾರ್ ಗಳನ್ನು ಸಹ ಪ್ರಕಟಿಸಲಾಗಿದೆ. ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ಹಾಸ್ಟೆಲ್ ಆರಂಭಿಸುವುದಾಗಿ ತಿಳಿಸಿದ್ದಾರೆ.
ಹೊಸದಾಗಿ 3 ಏಮ್ಸ್ ಆಸ್ಪತ್ರೆ ಘೋಷಿಸಲಾಗಿದೆ. ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲು ನಿರ್ಧರಿಸಲಾಗಿದೆ.



