Kannada NewsKarnataka NewsLatest

*ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ*

ನಂದಿನಿ ತುಪ್ಪ, ಬೆಣ್ಣೆ ದರ ದಿಢೀರ್ ಏರಿಕೆ


ಪ್ರಗತಿವಾಹಿನಿ ಸುದ್ದಿ: ಜಿಎಸ್ ಟಿ ಇಳಿಕೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದಷ್ಟೇ ನಂದಿನಿ ಉತ್ಪನ್ನಗಳ ದರ ಇಳಿಕೆ ಮಾಡಿದ್ದ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್​​) , ಇದೀಗ ಏಕಾಏಕಿ ತುಪ್ಪ, ಬೆಣ್ಣೆ ದರವನ್ನು ಏರಿಕೆ ಮಾಡಿದೆ.

ಒಂದು ಕೆ.ಜಿ ತುಪ್ಪಕ್ಕೆ 15 ರೂಪಾಯಿ ಹೆಚ್ಚಳವಾಗಿದ್ದರೆ, ಬೆಣ್ಣೆ ದರ ಕೆಜಿಗೆ ಬರೋಬ್ಬರಿ 22 ರೂ. ಏರಿಕೆ ಮಾಡಲಾಗಿದೆ. ಹೊಸ ದರ ನಾಳೆಯಿಂದ ಅಂದರೆ ಜುಲೈ 24ರಿಂದ ಜಾರಿ ಬರಲಿದ್ದು, ಗ್ರಾಹಕರಿಗೆ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.

ಪರಿಷ್ಕೃತ ದರದಿಂದಾಗಿ 1 kg ತುಪ್ಪ 700 ರಿಂದ 715ಕ್ಕೆ ಹೆಚ್ಚಳವಾಗಲಿದೆ. ಇನ್ನು 610 ರೂಪಾಯಿ ಇದ್ದ 1 KG ಬೆಣ್ಣೆ ದರ ಈಗ 660ಕ್ಕೆ ಏರಿಕೆಯಾಗಲಿದೆ. ನಂದಿನಿ ತುಪ್ಪ ಹಾಗೂ ಬೆಣ್ಣೆ ದರ ಏರಿಕೆ ಹಿನ್ನೆಲೆಯಲ್ಲಿ ಗೃಹ ಬಳಕೆ ಹಾಗೂ ಹೋಟೆಲ್ ಉದ್ಯಮದ ಮೇಲೂ ಪರಿಣಾಮ ಬೀರಲಿದ್ದು, ತುಪ್ಪ, ಬೆಣ್ಣೆಯಿಂದ ಮಾಡುವ ಆಹಾರ ಪದಾರ್ಥಗಳ ದರ ಕೂಡ ಏರಿಕೆಯಾಗುವ ಸಾಧ್ಯತೆಗಳಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button