Belagavi NewsBelgaum NewsKannada NewsKarnataka NewsLatest

*ಬೆನಾಡಿ ಗ್ರಾಮದ 30 ಕ್ಕೂ ಅಧಿಕ ಕಾರ್ಯಕರ್ತರು ಬಿಜೆಪಿ ಸೇರ್ಪಡೆ*

ಪ್ರಗತಿವಾಹಿನಿ ಸುದ್ದಿ: ನಿಪ್ಪಾಣಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ಅಭಿವೃದ್ದಿ ಕಾರ್ಯಗಳನ್ನು ಹಾಗೂ ನಿಪ್ಪಾಣಿ ಕ್ಷೇತ್ರದಲ್ಲಿ ಶಶಿಕಲಾ ಜೊಲ್ಲೆ ಮಾಡಿರುವ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ನಿಪ್ಪಾಣಿ ಮತಕ್ಷೇತ್ರದ ಬೆನಾಡಿ ಗ್ರಾಮದ ದಲಿತ ಸಮಾಜದ ಮುಖಂಡರಾದ ಬಾಳಾಸೋ ಮಾಳಗೆ, ಮೋಹನ ಕೋರೆ, ಅಜೀತ ಮಾನೆ, ಮಹಾದೇವ ಬೋರೆ, ಅವರ ನೇತೃತ್ವದಲ್ಲಿ ಸಂಜಯ ಗೋರೆ, ದೀಪಕ ಗೋರೆ, ರಮೇಶ ಕೋರೆ, ಪ್ರಭಾಕರ ಮಧಾಳೆ, ಗಣಪತಿ ಗೋರೆ, ಅರ್ಜುನ ಕಾಂಬಳೆ, ಸುರೇಖಾ ವರಾಲೆ, ರಾಜಶ್ರೀ ಮಾಳಗೆ ಹಾಗೂ ಅವರ ತಂಡದ 30 ಕ್ಕಿಂತ ಅಧಿಕ ರಾಷ್ಟ್ರವಾದಿ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪಕ್ಷ ತೊರೆದು ನಮ್ಮ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಜನಪ್ರಿಯ ಶಾಸಕರಾದ ಶಶಿಕಲಾ ಜೊಲ್ಲೆ ಹಾಗೂ ಮಾಜಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ ಯವರು ಆತ್ಮೀಯವಾಗಿ ಭಾರತೀಯ ಜನತಾ ಪಕ್ಷಕ್ಕೆ ಬರಮಾಡಿಕೊಂಡರು.

Home add -Advt

ಈ ಸಂದರ್ಭದಲ್ಲಿ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕರಾದ ರಮೇಶ ಪಾಟೀಲ,ಶ್ರೀಕಾಂತ ಬನ್ನೇ,ಭರತ ನಸಲಾಪುರೆ, ರಾಜು ಚಂದುರೆ,ಪಾಂಡುರಂಗ ಪಾಟೀಲ,ಸತ್ಯಪ್ಪ ಹಜಾರೆ ಶಿವರಾಜ ಪನ್ನೂರೆ,ಅರುಣ ಜಾವೀರ,ಸದಾಶಿವ ಜನವಾಡೇ,ರಾವಸಾಬ ಜನವಾಡೆ, ಲಕ್ಷ್ಮೀ ಖೋತ, ಬಬನ ಹವಾಲ್ದಾರ,ಕಲ್ಲಪ್ಪ ನಾಯಿಕ,ರಮೇಶ ಖೋತ,ರಾಜು ಖೋತ,ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Related Articles

Back to top button