
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ದಿನಾಂಕ ೦೮.೦೨.೨೦೨೬ ರಂದು ಬೆಳಿಗ್ಗೆ ೯ ಘಂಟೆಯಿಂದ ಸಾಯಂಕಾಲ ೫ ಘಂಟೆಯವರೆಗೆ ಕ.ವಿ.ಪ್ರ.ನಿ.ನಿ. ವತಿಯಿಂದ ೧೧೦ ಕೆ.ವ್ಹಿ ಎಮ್. ಕೆ. ಹುಬ್ಬಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳುತ್ತಿರುವುದರಿಂದ ಈ ಉಪಕೇಂದ್ರದಿಂದ ಸರಬರಾಜು ಆಗುವ ಹಿರೇಮುನವಳ್ಳಿ, ಚಿಕ್ಕಮುನವಳ್ಳಿ, ಗಾಡಿಕೊಪ್ಪ, ಜಿಕನೂರ, ಪಾರಿಶ್ವಾಡ, ಇಟಗಿ, ಬೋಗೂರ, ಬೇಡರಹಟ್ಟಿ, ಹಿರೇಹಟ್ಟಿಹೊಳಿ, ಚಿಕ್ಕಹಟ್ಟಿಹೊಳಿ ಹಾಗೂ ಕರವಿನಕೊಪ್ಪ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್ಸೆಟ್ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ದಿನಾಂಕ ೦೮.೦೨.೨೦೨೬ ರಂದು ಬೆಳಿಗ್ಗೆ ೦೯.೦೦ ಘಂಟೆಯಿಂದ ಸಾಯಂಕಾಲ ೦೫.೦೦ ಘಂಟೆಯವರೆಗೆ ಕ.ವಿ.ಪ್ರ.ನಿ.ನಿ. ವತಿಯಿಂದ ೧೧೦ ಕೆ.ವ್ಹಿ ಎಮ್. ಕೆ. ಹುಬ್ಬಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಾಲ್ಕನೇಯ ತ್ರೈಮಾಸಿಕ ಹಾಗೂ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ೩೩ ಕೆ.ವ್ಹಿ. ಗಂದಿಗವಾಡ ಉಪಕೇಂದ್ರದಿಂದ ಸರಬರಾಜು ಆಗುವ ಗಂದಿಗವಾಡ, ಹಿರೇ ಅಂಗ್ರೋಳ್ಳಿ, ಚಿಕ್ಕ ಅಂಗ್ರೊಳ್ಳಿ, ಹಂದೂರ, ಕೇರವಾಡ, ಹುಲಿಕೊತ್ತಲ, ಇಟಗಿ, ಬೋಗೂರ, ಬೇಡರಹಟ್ಟಿ, ತೊಲಗಿ, ಬಿಳಕಿ, ಅವರೊಳ್ಳಿ ಹಾಗೂ ಕಗ್ಗಣಗಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್ಸೆಟ್ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಳಗಾವಿ ಹುವಿಸಕಂನಿ, ಕಾ ಮತ್ತು ಪಾ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


