
ಪ್ರಗತಿವಾಹಿನಿ ಸುದ್ದಿ: ತಾಯಿ ತನ್ನ ಕುಡಿತದ ಚಟಕ್ಕೆ ಮಗಳನ್ನೇ ಕೊಲೆಗೈದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲೆಯ ರಾಜೀವ ಗಾಂಧಿ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಹತ್ತು ವರ್ಷದ ಮಗಳು ತಾಯಿಗೆ ಕುಡಿತದ ಚಟ ಬಿಡುವಂತೆ ಹೇಳಿದ್ದಳು. ತನಗೆ ಹಸಿವಾಗುತ್ತಿದೆ ಅಡುಗೆ ಮಾಡಿಕೊಡು ಎಂದು ಕೇಳಿದ್ದಳು. ಮಗಳು ತನಗೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡ ತಾಯಿ ಹತ್ತು ವರ್ಷದ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ನಿರ್ಮಲಾ ಮಗಳನ್ನೇ ಕೊಂದ ತಾಯಿ. ಮಗಳ ಕೊಲೆ ಬಳಿಕ ಆತ್ಮಹತ್ಯೆ ಎಂದು ಡ್ರಾಮಾ ಮಾಡಿದ್ದಾಳೆ. 15 ರೂಪಾಯಿ ಕೊಟ್ಟಿಲ್ಲ ಎಂದು ಕೋಪಗೊಂದ ಮಗಳು ಮನೆಯ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿದ್ದಾಳೆ.
ಕುಡಿದ ಮತ್ತಿನಲ್ಲಿದ್ದ ತಾಯಿಯನ್ನು ವಶಕ್ಕೆ ಪಡೆದ ಪೊಲಿಸರು ವಿಚಾರಣೆ ನಡೆಸಿದಾಗ ತಾನೇ ಮಗಳನ್ನೂ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾಳೆ. ಆರೋಪಿ ನಿರ್ಮಳನ್ನು ಪೊಲೀಸರು ಬಂಧಿಸಿದ್ದಾರೆ.




