
ಪ್ರಗತಿವಾಹಿನಿ ಸುದ್ದಿ: ಕೆಮಿಕಲ್ ಕಾರ್ಖಾನೆಯಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಘಟನೆಯಲ್ಲಿ 87 ಕಾರ್ಮಿಕರು ಸಜೀವದಹನವಾಗಿದ್ದಾರೆ.
ರಾಜಸ್ಥಾನದ ಭೀವಾಡಿಯ ಖುಷ್ಬೇಡಾ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದೆ. 7 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಘಟನೆ ವೇಳೆ ಫ್ಯಾಕ್ಟರಿಯಲ್ಲಿ 20-27 ಜನರು ಇದ್ದರು. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವರು ಹೊರಗೊಡಿ ಬಂದಿದ್ದಾರೆ. ಆದರೆ ಇನ್ನೂ ಹತ್ತು ಜನರು ಒಳಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.



