Belagavi NewsBelgaum NewsKannada NewsKarnataka NewsNationalPoliticsTechTravelWorld

*ಅಮೆರಿಕಾ ಎಐ ಕಂಪನಿಗೆ ಶಾಕ್ ನೀಡಿದ ಬೆಳಗಾವಿ ಕಂಪನಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಅಂಥೋಪಿಕ್ ಎಂಬ ಐಟಿ ಕಂಪನಿ ಅಮೆರಿಕ ಮೂಲದ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಸಂಸ್ಥೆ ಅಂಥೋಪಿಕ್ ಗೆ ಶಾಕ್ ನೀಡಿದೆ.

ತನ್ನ ಬ್ರಾಂಡ್ ಹೆಸರು ಮತ್ತು ಆನ್‌ಲೈನ್ ಗುರುತನ್ನು ರಕ್ಷಿಸುವ ಕಾನೂನುಗಳನ್ನು ಅಮೆರಿಕ ಮೂಲದ ಸಂಸ್ಥೆ ಉಲ್ಲಂಘಿಸಿದೆ ಎಂದು ಆರೋಪಿಸಿ, ಅಂಥೋಪಿಕ್ ಪಿಬಿಸಿ ವಿರುದ್ಧ ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ವಾಣಿಜ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದೆ.

Home add -Advt

ಜನವರಿ ಮೊದಲ ವಾರದಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದ ಮುಖ್ಯ ಕಚೇರಿಗೆ ಪತ್ರ ರವಾನಿಸಿ ಫೆ.16ರಂದು ಹಾಜರಾಗಲು ಕೋರ್ಟ್ ತಿಳಿಸಿತ್ತು. ಆದರೆ, ಕಂಪನಿಯ ಸಿಬ್ಬಂದಿ ಕೋರ್ಟ್‌ಗೆ ಹಾಜರಾಗಿರಲಿಲ್ಲ. ಹೀಗಾಗಿ, ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಅಮೆರಿಕ ಮೂಲದ ಎಐ ಕಂಪನಿ ಅಂಥೋಪಿಕ್ ಪಿಬಿಸಿಗೆ ಮತ್ತೊಮ್ಮೆ ಸಮನ್ಸ್‌ ಜಾರಿಗೊಳಿಸಿ, ಮಾ.9ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಆದೇಶಿಸಿದೆ.

ಅಮೆರಿಕದ ಈ ಕಂಪನಿಗೆ ಭಾರತದಲ್ಲಿ ಯಾವುದೇ ನೋಂದಣಿ ಅಥವಾ ಕಚೇರಿ ಇರಲಿಲ್ಲ. ಇತ್ತೀಚೆಗೆ ಅದು ಭಾರತದಲ್ಲಿ ಎಂಸಿಎ ಮೂಲಕ ನೋಂದಣಿ ಪೂರ್ಣಗೊಳಿಸಿದೆ. ಬೆಂಗಳೂರಿನ ದೊಮ್ಮಲೂರು ಪ್ರದೇಶದಲ್ಲಿ ಕಚೇರಿ ಸ್ಥಾಪಿಸಿದೆ. 

ಅಂಥೋಪಿಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿ ಇರಿನಾ ಘೋಷ್ ಅವರಿಗೆ ಸಮನ್ಸ್ ನೀಡುವಂತೆ ನ್ಯಾಯಾಧೀಶ ಮಂಜುನಾಥ ನಾಯಕ್ ಅವರು ಸೂಚಿಸಿದ್ದಾರೆ

ಬೆಳಗಾವಿ ನಗರದ ಬಾಟ್ ರಸ್ತೆಯಲ್ಲಿರುವ ಅಜಂ ನಗರದಲ್ಲಿರುವ ಅಂಥೋಪಿಕ್ ಸಾಫ್ಟ್‌ವೇರ್ ಪ್ರೈ.ಲಿ.ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಅಯ್ಯಾಜ್ ಮುಲ್ಲಾ ಅವರು ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದರು.‌

Related Articles

Back to top button