Belagavi NewsBelgaum NewsKannada NewsKarnataka NewsLatest

*ಪಯನಿಯರ್ ಬ್ಯಾಂಕ್ ವತಿಯಿಂದ ಡಾ. ಪ್ರಭಾಕರ ಕೋರೆ ಅವರಿಗೆ ಸನ್ಮಾನ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿರುವುದು ಹಾಗೂ ಕೆ.ಎಲ್.ಇ. ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಖ್ಯಾತ ಶಿಕ್ಷಣ ತಜ್ಞ ಡಾ. ಪ್ರಭಾಕರ ಕೋರೆ ಅವರನ್ನು ಪಯನಿಯರ್ ಬ್ಯಾಂಕ್ ವತಿಯಿಂದ ಗೌರವಿಸಲಾಯಿತು.


ಬ್ಯಾಂಕ್ ಅಧ್ಯಕ್ಷ ಪ್ರದೀಪ ಅಷ್ಟೇಕರ್ ಅವರು ಶಾಲು ಹೊದಿಸಿ ಪುಷ್ಪಗುಚ್ಛ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಅನಂತ ಲಾಡ ಅಭಿನಂದನಾ ಸಂದೇಶ ನೀಡುತ್ತಾ ಡಾ. ಕೋರೆ ಅವರ ಶೈಕ್ಷಣಿಕ, ಸಾಮಾಜಿಕ ಹಾಗೂ ಸಂಸ್ಥಾಪನಾ ಕ್ಷೇತ್ರದ ಸೇವೆಯನ್ನು ಪ್ರಶಂಸಿಸಿದರು.


ಕಾರ್ಯಕ್ರಮದಲ್ಲಿ ಪ್ರವೀಣ ಅಷ್ಟೇಕರ್, ವಿಜಯ ಮೋರೆ ಸೇರಿದಂತೆ ಬ್ಯಾಂಕ್‌ನ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.

Home add -Advt

Related Articles

Back to top button