Belagavi NewsBelgaum NewsKannada NewsKarnataka NewsLatest

*ಅಬಕಾರಿ ಪೊಲೀಸರ ಕಾರ್ಯಾಚರಣೆ: ಗೋವಾ ರಾಜ್ಯದ ಮದ್ಯ ಸೀಜ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಅಬಕಾರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಅಬಕಾರಿ ಪೊಲೀಸರು ದಾಳಿ ನಡೆಸಿರುವ ಘಟನೆ ಬೆಳಗಾವಿ ತಾಲೂಕಿನ ರಣಕುಂಡೆ ಗ್ರಾಮದ ಬಳಿ ನಡೆದಿದೆ. 

ಅಬಕಾರಿ ಸಿಪಿಐ ಮಂಜುನಾಥ ಮೆಳ್ಳಿಗೇರಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಗೋವಾ ರಾಜ್ಯದ ಮದ್ಯವನ್ನು ಕಳ್ಳ ಮಾರ್ಗದಿಂದ ಬೇರೆಡೆ ಕೊಂಡೊಯ್ಯುವಾಗ ರಣಕುಂಡೆ ಗ್ರಾಮದ ಬಳಿ ಕಾರ್ಯಾಚರಣೆ ನಡೆಸಿ ಸೀಜ್ ಮಾಡಲಾಗಿದೆ.‌

Home add -Advt

ಅಂದಾಜು 3,12,638 ಮೌಲ್ಯದ 205.04 ಲೀಟರ್ ಮದ್ಯ ಹಾಗೂ 25 ಲೀಟರ್ ಓರಾಕ್ ಮದ್ಯವನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದ್ದಿದ್ದು, ದಾಳಿ ಮಾಡುತ್ತಿದ್ದಂತೆ ಕಾರು ಬಿಟ್ಟು ಕಾರು ಚಾಲಕ ಎಸ್ಕೇಪ್ ಆಗಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ದಾಳಿಯಲ್ಲಿ ಭಾಗವಹಿಸಿದ ಸಿಬ್ಬಂದಿ

ಅಬಕಾರಿ ನಿರೀಕ್ಷಕ ಮಂಜುನಾಥ ಮೆಳ್ಳಿಗೇರಿ, ಅಬಕಾರಿ ಉಪ ನಿರೀಕ್ಷಕರ ಸುನೀಲ ಪಾಟೀಲ್, ಅಬಕಾರಿ ಪೇದೆ, ವಾಯ್ ಬಿ ಪಾಟೀಲ್, ಗೃಹ ರಕ್ಷಕ ಸಿಬ್ಬಂದಿ ಭರತ ಪಠಾತ ಇದ್ದರು.

Related Articles

Back to top button