LatestNationalPolitics

*ಕೇರಳ ರಾಜ್ಯದ ಹೆಸರು ಬದಲಾವಣೆ: ಕೇಂದ್ರ ಸಚಿವ ಸಂಪುಟ ಅನುಮೋದನೆ*

ಪ್ರಗತಿವಾಹಿನಿ ಸುದ್ದಿ: ಕೇರಳ ರಾಜ್ಯದ ಹೆಸರು ಬದಲಾವಣೆಯಾಗಿದ್ದು, ಕೇರಳದ ಬದಲು ಕೇರಳಂ ಎಂದು ಕರೆಯಲಾಗುತ್ತದೆ.

ರಾಜ್ಯದ ಹೆಸರನ್ನು ಕೇರಳಂ ಎಂದು ಬದಲಾಯಿಸುವ ಕೇರಳ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ.

ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಗೂ ಮುಂಚಿತವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಕೇರಳಂ ಎಂಬ ಹೆಸರು ಮಲಯಾಳಂ ಮೂಲ ಭಾಷೆಯದ್ದಾದ್ದರಿಂದ ಇಂಗ್ಲಿಷ್​ನ ಕೇರಳ ಎಂಬ ಹೆಸರಿನ ಬದಲು ಕೇರಳಂ ಬಳಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಕೇರಳದ ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇದಕ್ಕೆ ಕೇಂದ್ರ ಸಚಿವ ಸಂಪುಟದ ಸಮ್ಮತಿ ದೊರೆತಿದೆ.

Home add -Advt

ರಾಷ್ಟ್ರಪತಿಗಳ ಅನುಮೋದನೆ ಸಿಕ್ಕಿದರೆ ಕೇರಳ ರಾಜ್ಯದ ಹೆಸರು ಅಧಿಕೃತವಾಗಿ ಕೇರಳಂ ಎಂದು ಬದಲಾವಣೆಯಾಗಲಿದೆ.


Related Articles

Back to top button