CrimeKannada NewsKarnataka News

*ಪೊಕ್ಸೋ ಕೇಸ್: ಮ್ಯೂಸಿಕ್ ಮೈಲಾರಿಗೆ ಜಾಮೀನು ಮಂಜುರು*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪೋಕೋ ಪ್ರಕರಣದಲ್ಲಿ ಜೈಲು ಸೇರಿದ್ದ ಉತ್ತರ ಕರ್ನಾಟಕದ ಖ್ಯಾತ ಜನಪದ ಗಾಯಕ ಮ್ಯೂಸಿಕ್ ಮೈಲಾರಿಗೆ ಷರತ್ತು ಭದ್ಧ ಜಾಮೀನು ಸಿಕ್ಕಿದೆ. 

ಬಾಗಲಕೋಟೆ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೀತಿ ಸಗರ ಜೋಷಿ ಅವರು, ಇಂದು ಮ್ಯೂಸಿಕ್ ಮೈಲಾರಿಗೆ ಜಾಮೀನು ಮಂಜೂರು ಮಾಡುವ ವೇಳೆ ಮ್ಯೂಸಿಕ್ ಮೈಲಾರಿಗೆ ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ. 

ಒಂದು ಲಕ್ಷ ರೂಪಾಯಿ ಶೂರಿಟಿ ಬಾಂಡ್ ಸಲ್ಲಿಸಬೇಕು, ಪ್ರಾಸಿಕ್ಯೂಷನ್ ಮೇಲೆ ಯಾವುದೇ ಪ್ರಭಾವ ಬೀರಬಾರದು ಮತ್ತು ಇದೇ ರೀತಿಯ ಅಪರಾಧವನ್ನು ಮತ್ತೆ ಮಾಡಬಾರದು ಎಂಬುದು ಈ ಷರತ್ತುಗಳಲ್ಲಿ ಸೇರಿವೆ. 

ಕಳೆದ ಡಿಸೆಂಬರ್‌ನಿಂದ ಜೈಲು ಪಾಲಾಗಿದ್ದ ಮೈಲಾರಿಗೆ ಈ ಆದೇಶದೊಂದಿಗೆ ಬಿಡುಗಡೆ ಭಾಗ್ಯ ದೊರೆತಂತಾಗಿದೆ.

Home add -Advt

Related Articles

Back to top button