Kannada NewsKarnataka NewsLatestPolitics
*56,432 ಹುದ್ದೆಗಳ ಅಧಿಸೂಚನೆಗೆ ಸಂಪುಟ ಸಭೆ ಅನುಮೋದನೆ*

ಪ್ರಗತಿವಾಹಿನಿ ಸುದ್ದಿ: ಧಾರವಾಡ ಸೇರಿದಂತೆ ರಾಜ್ಯದ ಹಲವೆಡೆ ನಡೆದ ಪ್ರತಿಭಟನೆಗೆ ಮಣಿದ ಸರ್ಕಾರವು ಇದೀಗ ಉದ್ಯೋಗ ಗ್ಯಾರಂಟಿ ಭರವಸೆ ನೀಡಲು ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು (ಫೆ.26) ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು 56,432 ಹುದ್ದೆಗಳ ಅಧಿಸೂಚನೆಗೆ ಸಂಪುಟ ಸಭೆಯ ಅನುಮೋದನೆ ನೀಡಿದೆ.
ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಮಣಿದು ಸರ್ಕಾರ ಇದೀಗ 56,432 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲು ತೀರ್ಮಾನಿಸಿದ್ದು ಕೊನೆಗೂ ಉದ್ಯೋಗ ನೇಮಕಾತಿಗೆ ಚಾಲನೆ ನೀಡಲು ಸಂಪುಟ ಸಭೆ ಅಸ್ತು ಎಂದಿದೆ.



