Belagavi NewsBelgaum NewsCrimeKannada NewsKarnataka NewsNationalPolitics
*ಅಕ್ರಮವಾಗಿ ಸಾರಾಯಿ ಮಾರುತ್ತಿದ್ದ ಮಹಿಳೆಯ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಾಗವಾಡ ಪೊಲೀಸರಿಂದ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕಾಗವಾಡ ಪೊಲೀಸ್ ಠಾಣೆಯ ವ್ಯಾಪ್ತಿಯ ಮೋಳೆ ಗ್ರಾಮದ ಭೀಮ ನಗರದ ಸಾರ್ವಜನಿಕ ಸ್ಥಳದಲ್ಲಿ ಸಾರಿಕಾ ಪರಶುರಾಮ ಕಾಂಬಳೆ ಎಂಬ ಮಹಿಳೆ ಅನಧೀಕೃವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾಗವಾಡ ಪೊಲೀಸರು ದಾಳಿ ನಡೆಸಿ ಅಕ್ರಮ ಸಾರಾಯಿ ಹಾಗೂ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ದಾಳಿ ವೇಳೆ ಡಿಕೆ ಡಬಲ್ ಕಿಕ್ ಪೈನ್ ವಿಸ್ಕಿ 4640 ರೂ ಬೆಲೆಯ ಒಟ್ಟು 116 ಪೌಚಗಳು. ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿ4800 ರೂ ಬೆಲೆಯ ಒಟ್ಟು 96 ಪೌಚಗಳು. ಹೀಗೆ ಒಟ್ಟು 19.08 ಲೀಟರ ಸರಾಯಿ ತುಂಬಿದ 9440 ರೂ ಮೌಲ್ಯದ 212 ಪೌಚಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾಗವಾಡ ಪೊಲೀಸ ಠಾಣೆಯ ಗುನ್ನಾ ನಂ: 65-2026 ಕಲಂ: 32. 34 ಕರ್ನಾಟಕ ಅಬಕಾರಿ ಕಾಯಿದೆ-1965 ನೇದ್ದಕ್ಕೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.



