
ಪ್ರಗತಿವಾಹಿನಿ ಸುದ್ದಿ: 133 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಭಾರಿ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದ ಘಟನೆ ಥೈಲ್ಯಾಂಡ್ ಏರ್ ಪೋರ್ಟ್ ನಲ್ಲಿ ನಡೆದಿದೆ.
ಥೈಲ್ಯಾಂಡ್ ನ ಫುಕೆಟ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಹೈದರಾಬಾದ್ ನಿಂದ ಥೈಲ್ಯಾಂಡ್ ಗೆ ತೆರಳಿದ್ದ ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ಆಗುತ್ತಿದ್ದ ವೇಳೆ ಸ್ಕಿಡ್ ಆಗಿದೆ. ವಿಮಾನದ ಮುಂದಿನ ಚಕ್ರ ರನ್ ವೇಗೆ ಉಜ್ಜಿಕೊಂಡು ಲ್ಯಾಂಡ್ ಆಗಿದೆ.
ವಿಮಾನದ ಚಕ್ರ ನೆಲಕ್ಕೆ ಉಜ್ಜುತ್ತಿದ್ದಂತೆ ಹೊಗೆ ಕಾಣಿಸಿಕೊಂಡಿದೆ. ವಿಮಾನದ ಮುಂದಿನ ಚಕ್ರಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಭಾರಿ ದುರಂತವೊಂದು ಕ್ಷಣಾರ್ಧದಲ್ಲಿ ತಪ್ಪಿದೆ. ವಿಮಾನದಲ್ಲಿರುವ ಪ್ರಯಾಣಿಕರು, ಸಿಬ್ಬಂದಿಗಳು ಸುರಕ್ಷಿತರಾಗಿದ್ದಾರೆ ಎಂದು ತಿಳಿದುಬಂದಿದೆ.

