Film & EntertainmentKannada NewsNationalTravel

*ನಟನ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕುಂಭಮೇಳದ ವೈರಲ್ ಬೇಡಗಿ ಮೊನಾಲಿಸಾ*

ಪ್ರಗತಿವಾಹಿನಿ ಸುದ್ದಿ: 2025ರ ಕುಂಭಮೇಳದ ಸಮಯದಲ್ಲಿ ತನ್ನ ಸೌಂದರ್ಯದಿಂದಲೇ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದ ಮೊನಾಲಿಸಾ ಭೋಸ್ಲೆ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಕೇರಳದ ತಿರುವನಂತಪುರಂ ಸಮೀಪದ ದೇವಸ್ಥಾನವೊಂದರಲ್ಲಿ ನಟ ಮೊಹಮ್ಮದ್ ಫರ್ಮಾನ್ ಅವರೊಂದಿಗೆ ಮೊನಾಲಿಸಾ ವಿವಾಹ ನೆರವೇರಿದೆ. ಮೊನಾಲಿಸಾ ಮತ್ತು ಮೊಹಮ್ಮದ್ ಫರ್ಮಾನ್ ಅವರದ್ದು ಅಂತರ್ ಧರ್ಮೀಯ ವಿವಾಹವಾಗಿದ್ದು, ಮನೆಯವರ ವಿರೋಧದ ನಡುವೆ ಅವರು ಈ ತೀರ್ಮಾನ ತೆಗೆದುಕೊಂಡಿದ್ದಾರೆ.

Home add -Advt

ತಿರುವನಂತಪುರಂನ ಅರುಮನೂರಿನಲ್ಲಿರುವ ಮಂದಿರದಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಸ್ಥಳೀಯ ನಿವಾಸಿಗಳು ಮತ್ತು ರಾಜಕೀಯ ನಾಯಕರು ಭಾಗವಹಿಸಿದ್ದರು. ಅರ್ಚಕರು ನೀಡಿದ ತಾಳಿಯನ್ನು ಕಟ್ಟಿ, ಕುಂಕುಮವನ್ನು ಇಡುವ ಮೂಲಕ ಫರ್ಮಾನ್ ಅವರು ಮೊನಾಲಿಸಾ ಅವರನ್ನು ವರಿಸಿದರು. 

ಮೊನಾಲಿಸಾ ಅವರು ಇಂದೋರ್‌ ಮೂಲದವರು. ಮೊಹಮ್ಮದ್ ಫರ್ಮಾನ್ ಮಹಾರಾಷ್ಟ್ರದವರು. ಇವರಿಬ್ಬರೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದು, ಆರು ತಿಂಗಳ ಹಿಂದೆ ಚಿತ್ರೀಕರಣದ ವೇಳೆಯಲ್ಲಿ ಭೇಟಿಯಾಗಿದ್ದರು. 

ಕೇರಳದ ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಅವರು ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು. ಹೊರರಾಜ್ಯದ ಕಲಾವಿದರು ಕೇರಳಕ್ಕೆ ಬಂದು ಅಲ್ಲಿನ ಸಂಪ್ರದಾಯದಂತೆ ಮದುವೆ ಆಗಿರುವುದು ವಿಶೇಷವಾಗಿದೆ. ಮದುವೆ ಬಳಿಕ ತಮಗೆ ರಕ್ಷಣೆ ಬೇಕು ಎಂದು ಫರ್ಮಾನ್ ಮತ್ತು ಮೊನಾಲಿಸಾ ಅವರು ಕೇರಳ ಪೊಲೀಸರ ಮೊರೆ ಹೋಗಿದ್ದಾರೆ.

Related Articles

Back to top button