CrimeKannada NewsKarnataka NewsNationalPolitics

*ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಮೇಲೆ ಗುಂಡಿನ ದಾಳಿ*

ಪ್ರಗತಿವಾಹಿನಿ ಸುದ್ದಿ: ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು, ಕೂದಲೆಳೆ ಅಂತರದಲ್ಲಿ ಅವರು ಪಾರಾಗಿದ್ದು ಆರೋಪಿ ಅರೆಸ್ಟ್ ಆಗಿದ್ದಾನೆ. 

ಹತ್ಯೆ ಮಾಡಲು ಯತ್ನಿಸಿದ ವ್ಯಕ್ತಿ ತಾನು 20 ವರ್ಷಗಳಿಂದ ಆ ಕ್ಷಣಕ್ಕಾಗಿ ಕಾಯುತ್ತಿದ್ದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಈ ದಾಳಿ “ವೈಯಕ್ತಿಕ ದ್ವೇಷದಿಂದ” ಉಂಟಾಗಿದೆ ಎಂದು ಅವನು ಒಪ್ಪಿಕೊಂಡಿದ್ದಾನೆ.

Home add -Advt

ಜಮ್ಮುವಿನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಘಟನೆ ನಡೆದಿದ್ದು, 63 ವರ್ಷದ ಶೂಟರ್ ಕಮಲ್ ಸಿಂಗ್ ಜಮ್ವಾಲ್ ಅಬ್ದುಲ್ಲಾ ಅವರ ಹತ್ತಿರದಿಂದ ಬಂದು ತನ್ನ ಪರವಾನಗಿ ಪಡೆದ ಗನ್ ನಿಂದ ಗುಂಡು ಹಾರಿಸಿದ್ದಾನೆ.

ಆತನು ಹಾರಿಸಿದ ಗುಂಡಿನ ಗುರಿ ತಪ್ಪಿತು ಮತ್ತು ರಾಷ್ಟ್ರೀಯ ಭದ್ರತಾ ಸಿಬ್ಬಂದ ಕಮಾಂಡೋಗಳು ಅವನನ್ನು ಕೂಡಲೆ ಬಂಧಿಸಿದ್ದಾರೆ.

ಜಾಮ್ವಾಲ್ ತಾನು ‘ಜಾಗ್ರಣ್ ಮಂಚ್’ನ ಅಧ್ಯಕ್ಷರೆಂದು ಹೇಳಿಕೊಂಡಿದ್ದಾರೆ. ಘಟನೆ ನಡೆದಾಗ ಫಾರೂಕ್ ಅಬ್ದುಲ್ಲಾ ಅವರೊಂದಿಗೆ ಜಮ್ಮು ಮತ್ತು ಕಾಶ್ಮೀರ ಉಪಮುಖ್ಯಮಂತ್ರಿ ಸುರೀಂದರ್ ಚೌಧರಿ ಕೂಡ ಸ್ಥಳದಲ್ಲಿದ್ದರು.

Related Articles

Back to top button