Belagavi NewsBelgaum NewsBusinessKannada NewsKarnataka NewsLatest

*ಬೃಹತ್ ಕೈಗಾರಿಕಾ, ವಾಣಿಜ್ಯ ಪ್ರದರ್ಶನ -ಬೆಲೆಕ್ಸ್- 2026 ಮಂಗಳವಾರ ಆರಂಭ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (BCCI) ವತಿಯಿಂದ 3 ದಿನಗಳ ಬೃಹತ್ ಕೈಗಾರಿಕಾ ಮತ್ತು ವಾಣಿಜ್ಯ ಪ್ರದರ್ಶನ ಬೆಲೆಕ್ಸ್ -2026 ನಡೆಯಲಿದ್ದು, ಮಂಗಳವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ.

ಮಾರ್ಚ್ 24, 25 ಹಾಗೂ 26, 2026ರಂದು ಉದ್ಯಮಬಾಗ್‌ನ ಫೌಂಡ್ರಿ ಕ್ಲಸ್ಟರ್‌ನಲ್ಲಿ ಇಂಡಸ್ಟ್ರಿಯಲ್ ಮತ್ತು ಟ್ರೇಡ್ ಎಕ್ಸಿಬಿಷನ್ ನಡೆಯಲಿದೆ. ಬೆಳಗಾವಿ ಹಾಗೂ ಉತ್ತರ ಕರ್ನಾಟಕದ ಉತ್ಪಾದನಾ (Manufacturing), ವ್ಯಾಪಾರ (Trading), ಶಿಕ್ಷಣ (Education), ಕೃಷಿ (Agro) ಮತ್ತು ಆಹಾರ ಸಂಸ್ಕರಣಾ (Food Processing) ಕ್ಷೇತ್ರಗಳ ಸಾಮರ್ಥ್ಯವನ್ನು ಹೆಚ್ಚು ವ್ಯಾಪಕವಾಗಿ ಪರಿಚಯಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿದೆ.

ಇಲ್ಲಿಯ ಕೈಗಾರಿಕೆಗಳ ಶಕ್ತಿಯನ್ನು ಪ್ರದರ್ಶಿಸುವುದರ ಜೊತೆಗೆ ವಿವಿಧ ಉತ್ಪನ್ನಗಳು ಮತ್ತು ಸೇವೆಗಳನ್ನು ಈ ವೇದಿಕೆಯ ಮೂಲಕ ಪ್ರಚಾರ ಮಾಡುವ ಅವಕಾಶವನ್ನೂ ಕಲ್ಪಿಸಲಾಗಿದೆ. ಬೆಳಗಾವಿ ಅಲ್ಲದೆ ಗೋವಾ, ಕೊಲ್ಲಾಪುರ, ಹುಬ್ಬಳ್ಳಿ ಧಾರವಾಡ ಉದ್ಯಮಿಗಳನ್ನೂ ಆಹ್ವಾನಿಸಲಾಗಿದೆ. ಈ ಎಕ್ಸಿಬಿಷನ್‌ಗಾಗಿ 85ಕ್ಕಿಂತ ಹೆಚ್ಚು ಸ್ಟಾಲ್‌ಗಳನ್ನು ಹಾಕಲಾಗಿದ್ದು, ಇದರಿಂದ ಕೈಗಾರಿಕೆ ಮತ್ತು ವ್ಯಾಪಾರ ವಲಯದವರಿಗೆ ಪರಸ್ಪರ ಸಂವಹನ, ನೆಟ್‌ವರ್ಕಿಂಗ್ ಮತ್ತು ವ್ಯಾಪಾರ ವಿಸ್ತರಣೆಗೆ ಉತ್ತಮ ಅವಕಾಶಗಳು ದೊರೆಯಲಿವೆ.

Home add -Advt

BELEX 2026 ಒಂದು B2B (ಬಿಸಿನೆಸ್-ಟು-ಬಿಸಿನೆಸ್) ಪ್ರದರ್ಶನವಾಗಿದ್ದು, ಬೆಳಗಾವಿಯ ಕೈಗಾರಿಕಾ ಪರಿಸರದ ಶಕ್ತಿಯನ್ನು ಪರಿಚಯಿಸುವುದರ ಜೊತೆಗೆ ಉದ್ಯಮಿಗಳಲ್ಲಿ ಜಾಗೃತಿ ಮೂಡಿಸುವುದು ಹಾಗೂ ಸ್ಥಳೀಯ ಕೈಗಾರಿಕೆಗಳ ಪುನರುಜ್ಜೀವನ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಉದ್ದೇಶವನ್ನು ಹೊಂದಲಾಗಿದೆ.

ಬಿಸಿಸಿಐ ಹಾಗೂ ಇವೆಂಟ್ ಆರ್ಗನೈಸಿಂಗ್ ಸಮಿತಿಯ ಪರವಾಗಿ ಎಲ್ಲಾ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು, ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಈ ಪ್ರದರ್ಶನಕ್ಕೆ ಭೇಟಿ ನೀಡಿ ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸಲಾಗಿದೆ.

ಶಾಸಕ ಅಭಯ ಪಾಟೀಲ, ಉದ್ಯಮಿ ಜಯಂತ ಹುಂಬರವಾಡಿ, ಗೋವಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷೆ ಪ್ರತಿಮಾ ದೋಂಡ್ ಸೇರಿದಂತೆ ಹಲವಾರು ಗಣ್ಯರು ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುವರು. ಮೂರು ದಿನವೂ ವ್ಯಾಪಾರೋದ್ಯಮಕ್ಕೆ ಸಂಬಂಧಿಸಿದ ವಿವಿಧ ಗೋಷ್ಠಿಗಳು, ಸಂವಾದ ಮತ್ತಿತರ ಕಾರ್ಯಕ್ರಮಗಳು ಸಹ ನಡೆಯಲಿವೆ.

Mega Industrial & Trade Exhibition – BELEX 2026 to Begin on Tuesday
Belagavi: A three-day mega Industrial and Trade Exhibition, BELEX 2026, organized by the Belagavi Chamber of Commerce and Industries (BCCI), will commence on Tuesday at 10:00 AM.
The exhibition will be held from March 24 to 26, 2026, at the Foundry Cluster, Udyambag. It aims to showcase the strengths of Belagavi and North Karnataka across key sectors such as manufacturing, trading, education, agriculture, and food processing.
The event provides a platform to highlight the capabilities of local industries while offering opportunities to promote various products and services. Entrepreneurs and industry representatives from Belagavi, Goa, Kolhapur, and Hubballi-Dharwad have been invited to participate.
More than 85 stalls have been set up, creating a strong platform for networking, business interactions, and expansion opportunities for participants.
BELEX 2026 is a B2B (Business-to-Business) exhibition, designed to showcase the industrial ecosystem of Belagavi, create awareness among entrepreneurs, and promote the revival and growth of local industries.
On behalf of BCCI and the organizing committee, all industrialists, traders, entrepreneurs, students, and the general public are invited to visit and benefit from the exhibition.
The inauguration ceremony will be attended by several dignitaries, including Maharashtra Minister Lalit Gandhi, MLA Abhay Patil, industrialist Jayant Humbarwadi, and Goa Chamber of Commerce President Pratima Dond.
In addition to the exhibition, seminars, panel discussions, and interactive sessions related to trade and industry will be held throughout the three-day event.

Related Articles

Back to top button