Kannada NewsKarnataka NewsLatestTravel

*ರೈಲ್ವೆ ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್*

ಪ್ರಗತಿವಾಹಿನಿ ಸುದ್ದಿ: ರಾಜ್ಯದ ರೈಲು ಪ್ರಯಾಣಿಕರಿಗೆ ರೈಲ್ವೆ ಮಂಡಳಿ ಗುಡ್ ನ್ಯೂಸ್ ನೀಡಿದೆ. ರಾಜ್ಯದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗೆ ಪರಿವರ್ತಿಸಲಾಗಿದೆ.

ಕರ್ನಾಟಕದಲ್ಲಿ ಸಂಚರಿಸುತ್ತಿದ್ದ 19 ವಿಶೇಷ ರೈಲುಗಳನ್ನು ಖಾಯಂ ಸೇವೆಗೆ ಪರಿವರ್ತಿಸಲಾಗಿದೆ. 6 ಎಕ್ಸ್‌ಪ್ರೆಸ್ ರೈಲುಗಳು, 9 ಮೆಮು/ಡೆಮು ಹಾಗೂ 4 ಪ್ಯಾಸೆಂಜರ್ ರೈಲುಗಳು ಇದರಲ್ಲಿ ಸೇರಿವೆ. ಇದರ ಜೊತೆಗೆ ಟಿಕೆಟ್ ಪ್ರಯಾಣ ದರ ಕೂಡ ಇಳಿಕೆಯಾಗಿದೆ. ಸ್ಲೀಪರ್ ಕೋಚ್​ಗಳಲ್ಲಿ ಶೇ.30 ರವರೆಗೆ ಮತ್ತು ಸಾಮಾನ್ಯ ಟಿಕೆಟ್‌ಗಳಲ್ಲಿ ಶೇ. 10-15ರವರೆಗೆ ದರ ಕಡಿಮೆಯಾಗಲಿದೆ ಎಂದು ತಿಳಿದುಬಂದಿದೆ.

ಖಾಂಗೊಂಡ 6 ವಿಶೇಷ ರೈಲುಗಳು:
ಮೈಸೂರು – ಅಜ್ಮೀರ್‌ ಎಕ್ಸ್‌ಪ್ರೆಸ್‌ ( ರೈ.ಸಂ 16281/16282) ವಾರಕ್ಕೊಮ್ಮೆ ಸಂಚರಿಸಲಿದೆ
ಬೆಂಗಳೂರು ದಂಡು – ಕಲಬುರಗಿ ಎಕ್ಸ್‌ಪ್ರೆಸ್‌ (ರೈ.ಸಂ 16563/16564) ವಾರಕ್ಕೊಮ್ಮೆ ಸಂಚರಿಸಲಿದೆ
SMVT ಬೆಂಗಳೂರು – ಬೀದರ್‌ ಎಕ್ಸ್‌ಪ್ರೆಸ್‌ (ರೈ.ಸಂ 16559/16560) ವಾರಕ್ಕೊಮ್ಮೆ ಸಂಚರಿಸಲಿದೆ
ಯಶವಂತಪುರ – ತಾಳಗುಪ್ಪ ಎಕ್ಸ್‌ಪ್ರೆಸ್ (ರೈ.ಸಂ16555/16556) ವಾರಕ್ಕೊಮ್ಮೆ ಸಂಚರಿಸಲಿದೆ
ಹುಬ್ಬಳ್ಳಿ – ಯೋಗನಗರಿ ರಿಷಿಕೇಶ ಎಕ್ಸ್‌ಪ್ರೆಸ್ (ರೈ.ಸಂ17363/17364) ವಾರಕ್ಕೊಮ್ಮೆ ಸಂಚರಿಸಲಿದೆ
ಮಡಗಾಂವ್ – ಕಾರವಾರ ಎಕ್ಸ್‌ಪ್ರೆಸ್ (ರೈ.ಸಂ 10109/10110)

9 ಮೆಮು, ಡೆಮು ರೈಲುಗಳು:
ಬೆಂಗಳೂರು – ಹೊಸೂರು ಮೆಮು (ರೈ.ಸಂ 66595/96) ಪ್ರತಿದಿನ ಸಂಚರಿಸಲಿದೆ
ಹುಬ್ಬಳ್ಳಿ – ವಿಜಯಪುರ ಮೆಮು ( ರೈ.ಸಂ66501/02) ಪ್ರತಿದಿನ ಸಂಚರಿಸಲಿದೆ
ಬೆಂಗಳೂರು – ಅಶೋಕಪುರಂ ಮೆಮು (ರೈ.ಸಂ66597/98) ಪ್ರತಿದಿನ ಸಂಚರಿಸಲಿದೆ
ಬೆಂಗಳೂರು – ಅಶೋಕಪುರಂ ಮೆಮು (ರೈ.ಸಂ 06213/14) ವಾರಕ್ಕೆ 3 ಬಾರಿ ಸಂಚರಿಸಲಿದೆ
ಬಂಗಾರಪೇಟೆ – SMVT ಬೆಂಗಳೂರು ಮೆಮು (ರೈ.ಸಂ 66537/38) ಪ್ರತಿದಿನ ಸಂಚರಿಸಲಿದೆ
ಹೊಸಪೇಟೆ – ಹುಬ್ಬಳ್ಳಿ ಡೆಮು (ರೈ.ಸಂ76507/08) ವಾರಕ್ಕೊಮ್ಮೆ ಸಂಚರಿಸಲಿದೆ
ಬಳ್ಳಾರಿ – ದಾವಣಗೆರೆ ಡೆಮು (ರೈ.ಸಂ76509/10)ವಾರಕ್ಕೆ 6 ದಿನ ಸಂಚರಿಸಲಿದೆ
ಬೆಂಗಳೂರು – ಹಾಸನ ಡೆಮು (ರೈ.ಸಂ66525/26)ವಾರಕ್ಕೆ 6 ದಿನ ಸಂಚರಿಸಲಿದೆ
ಬಳ್ಳಾರಿ – ಹೊಸಪೇಟೆ ಡೆಮು (ರೈ.ಸಂ07397/98) ವಾರಕ್ಕೆ 6 ದಿನ ಸಂಚರಿಸಲಿದೆ

Home add -Advt

ನಾಲ್ಕು ಪ್ಯಾಸೇಂಜರ್ ರೈಲು:
ಬೆಂಗಳೂರು-ಚನ್ನಪಟ್ಟಣ
ಮೈಸೂರು-ಎಸ್‌ಎಂವಿಟಿ ಬೆಂಗಳೂರು,
ಯಶವಂತಪುರ-ಹಿಂದೂಪುರ
ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ರೈಲುಗಳು ಕೂಡ ಖಾಯಂಗೊಂಡಿವೆ.

Related Articles

Back to top button