Belagavi NewsBelgaum NewsCrimeKannada NewsKarnataka NewsNationalPolitics
*ಮನೆಗಳ್ಳತನ ಮಾಡಿದ ಕಳ್ಳಿ ಬಂಧನ: 68.74 ಗ್ರಾಂ ಬಂಗಾರದ ಆಭರಣ ಜಪ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಮನೆ ಕಳ್ಳತನ ಮಾಡಿದ ಕಳ್ಳಿಯನ್ನು ಬಂಧಿಸಿರುವ ಬೆಳಗಾವಿ ಪೊಲೀಸರು ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಸುರೇಖಾ ಕೊಂ. ಬಸವರಾಜ ತಳವಾರ, (40) ಎಂಬ ಕಳ್ಳಿಯನ್ನು ಬಂಧಿಸಿದ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವದಾಗಿ ಒಪ್ಪಿಕೊಂಡಿದ್ದಾರೆ.
ಆರೋಪಿ ಕಳ್ಳತನ ಮಾಡಿದ ಬಂಗಾರದ ಆಭರಣಗಳು ತನ್ನ ವಶದಲ್ಲಿ ಇಟ್ಟುಕೊಂಡ ಬಗ್ಗೆ ಹೇಳಿಕೆ ನೀಡಲು ಆರೋಪಿತಳ ವಶದಿಂದ ಕಳ್ಳತನ ಮಾಡಿದ 9.27.990 ರೂ. ಮೌಲ್ಯದ 68.74 ಗ್ರಾಂ ಬಂಗಾರದ ಆಭರಣಗಳು ಜಪ್ತಿ ಮಾಡಲಾಗಿದೆ.

