Belagavi NewsBelgaum NewsKannada NewsKarnataka News

*ಏ.1 ರಿಂದ ಜನಗಣತಿ ಆರಂಭ: ಸ್ವಯಂ ಗಣತಿಗೆ ಅವಕಾಶ: ಡಿಸಿ ಮೊಹಮ್ಮದ ರೋಷನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಭಾರತ ಗೃಹ ಮಂತ್ರಾಲಯ ಅಧಿಸೂಚನೆಯನ್ವಯ ರಾಜ್ಯದಲ್ಲಿ 2027 ರ ಜನಗಣತಿಯ ಮೊದಲ ಹಂತವಾದ ಮನೆಗಳ ಪಟ್ಟಿ ಮತ್ತು ಮನೆ ಗಣತಿಯ (Houselisting & Housing Census – HLO) – (Self Enumeration) 2.1.2026 00 ಏ.15 2026 ರವರೆಗೆ 15 ದಿನಗಳ ಕಾಲ ನಡೆಯಲಿದೆ.

ಜಿಲ್ಲೆಯ ನಾಗರಿಕರು ತಮ್ಮ ಮನೆಗಳಲ್ಲಿ ಕುಳಿತುಕೊಂಡೇ ಆನ್‌ಲೈನ್ ಮೂಲಕ ಸ್ವಯಂವಾಗಿ ತಮ್ಮ ಕುಟುಂಬದ ಮಾಹಿತಿಯನ್ನು ಭರ್ತಿ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮುನ್ಸಿಪಲ್ ಕಾರ್ಪೊರೇಷನ್ ಹೊರತುಪಡಿಸಿ ಒಟ್ಟು 56 ಚಾರ್ಜ್ ಕಚೇರಿಗಳು ಸ್ಥಾಪಿಸಲಾಗಿದೆ. ಪ್ರತಿ ಚಾರ್ಜ್ ಕಚೇರಿ ವ್ಯಾಪ್ತಿಯಲ್ಲಿ ಜನಗಣತಿ ಕಾರ್ಯವನ್ನು ಸಮರ್ಥವಾಗಿ ನಡೆಸಲಾಗುತ್ತಿದೆ.

ಗಣತಿದಾರರು (Field Enumeration) 16 ಎಪ್ರಿಲ್ 2026 00 15 ಮೇ 2026 ವರೆಗೆ ಮೆನೆಮೆನೆಗೆ ಭೇಟಿ ನೀಡುತ್ತಾರೆ. ತಾವು ನೀಡುವ ಎಲ್ಲಾ ಮಾಹಿತಿ ಸಂಪೂರ್ಣ ರಹಸ್ಯವಾಗಿರುತ್ತದೆ, ತಪ್ಪು ಮಾಹಿತಿ ನೀಡಬಾರದು, ಪ್ರತಿಯೊಬ್ಬ ನಾಗರಿಕರು ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. 

ಎಲ್ಲರೂ ಸೇರಿ ಜನಗಣತಿಯಲ್ಲಿ ಭಾಗವಹಿಸೋಣ, ನಮ್ಮ ಊರು, ನಮ್ಮ ಜಿಲ್ಲೆ ಇನ್ನಷ್ಟು ಅಭಿವೃದ್ಧಿಯಾಗೋಕೆ ಸಹಕರಿಸೋಣ ಎಂದು ಜಿಲ್ಲಾ ಪ್ರಧಾನ ಜನಗಣತಿ ಅಧಿಕಾರಿಗಳು, ಹಾಗೂ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

ಸ್ವಯಂ ಗಣತಿ ವಿಧಾನ: https://se.census.gov.in ಅಧಿಕೃತ ವೆಬಸೈಟ್‌ನಲ್ಲಿ ಮೋಬೈಲ್ ಸಂಖ್ಯೆ

ಮೂಲಕ ಓ.ಟಿ.ಪಿ. ಪಡೆದು ಲಾಗಿನ್ ಆಗಬೇಕು. ಕುಟುಂಬದ ಎಲ್ಲಾ ಸದಸ್ಯರ ವಿವರಗಳನ್ನು ಸರಿಯಾಗಿ ನಮೂದಿಸಬೇಕು. ವಿವರಗಳನ್ನು ಸಲ್ಲಿಸಿದ ನಂತರ SE Reference ID ಪಡೆಯಬೇಕು. ಈ ID ಅನ್ನು ಭವಿಷ್ಯದಲ್ಲಿ ಗಣತಿದಾರರಿಗೆ ತೋರಿಸಬೇಕು. ಸ್ವಯಂ ಗಣತಿಯಿಂದಾಗಿ ಸಮಯದ ಉಳಿತಾಯದ ಜೊತೆಗೆ ನಿಮ್ಮ ಮಾಹಿತಿಯನ್ನು ನೀವು ಸ್ವತಃ ನಿಖರವಾಗಿ ನೀಡಬಹುದು. ಡಿಜಿಟಲ್ ವಿಧಾನದಿಂದ ವೇಗವಾದ ಪ್ರಕ್ರಿಯೆ, ಸರ್ಕಾರಕ್ಕೆ ಯೋಜನೆ ರೂಪಿಸಲು ನಿಖರ ಡೇಟಾ ದೊರೆಯುತ್ತದೆ.

Related Articles

Back to top button