Belagavi NewsBelgaum NewsCrimeKannada NewsKarnataka NewsNationalPolitics
*ತಲ್ವಾರ್ ಇಟ್ಟುಕೊಂಡು ಹವಾ ಮೇಂಟೇನ್ ಮಾಡುತ್ತಿದ್ದವನ ಚಳಿ ಬಿಡಿಸಿದ ಬೆಳಗಾವಿ ಪೊಲೀಸರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದ ಕ್ಯಾಂಪ್ ಠಾಣೆ ಪೊಲೀಸರು ಮಾರಕಾಸ್ತ್ರ ಹೊಂದಿದ ಆರೋಪಿತನ ಬಂಧಿಸಿ ಮಾರಕಾಸ್ತ್ರ ವಶಕ್ಕೆ ಪಡೆದುಕೊಂಡಿದ್ದಾರೆ.
ಕ್ಯಾಂಪ್ ಪೊಲೀಸ್ ಠಾಣೆಯ ಪಿಎಸ್ಐ ರುಕ್ಕಿಣಿ ಎ. ಅವರು ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಂಶಯಾಸ್ಪದ ವ್ಯಕ್ತಿಗಳನ್ನು ಪರಿಶೀಲನೆ ಮಾಡುತ್ತಿರುವಾಗ ಆರೋಪಿ ಅರುಣ ಪರುಶರಾಮ ಗಾಡಿವಡ್ಡರ (20) ಎಂಬುವರು ದುರ್ಗಾ ಕಾಲನಿಯಲ್ಲಿ ತನ್ನ ಬಳಿ ಕಾನೂನು ಬಾಹಿರವಾಗಿ ಹರಿತವಾದ ತಲವಾರನ್ನು ಇಟ್ಟುಕೊಂಡಾಗ ಸಿಕ್ಕಿ ಬಿದಿದ್ದಾನೆ.
ಆರೋಪಿಯನ್ನು ವಶಪಡಿಸಿಕೊಂಡು ಆತನಿಂದ ಹರಿತವಾದ ತಲವಾರ್ ಜಪ್ತಪಡಿಸಿಕೊಂಡು ಆರೋಪಿ ವಿರುದ್ಧ ಕ್ಯಾಂಪ್ ಪೊಲೀಸ್ ಠಾಣೆ ಪ್ರ ಸಂ. 27/2026 ಕಲಂ.27(1) ಇಂಡಿಯನ್ ಆರ್ಮ ಆಕ್ಷ & ಕಲಂ. 97 ಕೆ.ಪಿ. ಆಕ್ಷ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ. ಪ್ರಕರಣದ ತನಿಖೆ ಮುಂದುವರೆಸಲಾಗಿದೆ.



