Belagavi NewsBelgaum NewsKarnataka NewsLatestPolitics

*ಮಂತ್ರಿಸ್ಥಾನ ಕೊಡಿ ಎಂದು ಚಿಕ್ಕಮಕ್ಕಳಂತೆ ಕೇಳುವುದಿಲ್ಲ: ಶಾಸಕ ಅಶೋಕ ಪಟ್ಟಣ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಮಂತ್ರಿಸ್ಥಾನ ಕೊಡಿ ಎಂದು ನಾನು ಪದೇ ಪದೇ ಚಿಕ್ಕಮಕ್ಕಳಂತೆ  ಕೇಳುವುದಿಲ್ಲ ಎಂದು ರಾಮದುರ್ಗ ಮತ ಕ್ಷೇತ್ರದ ಶಾಸಕ ಅಶೋಕ ಪಟ್ಟಣ ಅವರು ತಿಳಿಸಿದರು.

ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಸಚಿವ ಸ್ಥಾನಕ್ಕಾಗಿ ಮುಖ್ಯಮಂತ್ರಿ ಹಿಂದೆ ಬೀಳಲ್ಲಾ. ನಮಗೂ ಗೌರವವಿದೆ, ಸ್ವಾಭಿಮಾನವಿದೆ. ಸಚಿವ ಸ್ಥಾನಕ್ಕಿಂತಲೂ ಸ್ವಾಭಿಮಾನ ದೊಡ್ಡದಾಗಿರುತ್ತೇ ಎಂದು ಹೇಳಿದರು.

ಬೆಳಗಾವಿ ಜಿಲ್ಲೆಗೆ 3 ಸಚಿವ ಸ್ಥಾನ ಕೇಳಿದ್ದೇವೆ.ಸಿಎಂ ಅವರಿಗೆ ಗೊತ್ತಿದೆ ನಾವು ಎಷ್ಟು ಕೆಲಸ ಮಾಡಿದ್ದೇವೆ, ನಿಷ್ಠಾವಂತ ಅಂತಾ ಗೊತ್ತಿದೆ. ಸಂದರ್ಭಕ್ಕೆ ಅನುಸಾರವಾಗಿ ಮಂತ್ರಿ ಮಂಡಲ ಮಾಡ್ತಾರೆ. ನನ್ನ ರಾಜಕೀಯ ನಿವೃತ್ತಿ ಎಲ್ಲವೂ ಊಹಾಪೋಹಗಳು ಎಂದರು.

ನಾನು ಮುಂದಿನ ಚುನಾವಣೆ ಗೆ ಸಿದ್ಧನಾಗುತ್ತಿದ್ದೇನೆ. ಈ ಬಾರಿ 12 ಸಾವಿರ ಲೀಡ್ ಇದ್ದವಿ, ಮುಂದಿನ ಬಾರಿ 25 ಸಾವಿರ ಲೀಡ್ ನಲ್ಲಿ ಗೆಲ್ಲತ್ತೇನೆ. ರಾಜಕೀಯದಲ್ಲಿ ಎಲ್ಲರೂ ಹೇಳುತ್ತಾರೆ ಕೊನೆ ಚುನಾವಣೆ ಅಂತಾ. ಆದ್ರೆ ಸಾಯುವ ವರೆಗೂ ನಾವೆ ಇರಬೇಕು ಅಂತಾರೆ. ನಾನು ಏನೆ ಇದ್ದರೂ ನೇರವಾಗಿ ಹೇಳುತ್ತೇನೆ. ನಾನು ನನ್ನ ಲಾಸ್ಟ್ ಚುನಾವಣೆ ಅಂತಾ ಹೇಳಿಯೇ ಇಲ್ಲ. ಇದು ನನ್ನ ಕೊನೆ ಚುನಾವಣೆ ಅಂತಾ ವಿರೋಧಿಗಳು ಅಪ್ರಚಾರ ಮಾಡುತ್ತಿದ್ದಾರೆ. ನಾನು ವೀಕ್ ಅಂತಾ ಆಗುವುದಿಲ್ಲ, ಸುಳ್ಳು ಸುದ್ದಿ ಹಬ್ಬಿಸಿ, ಅಪ್ರಚಾರ ಮಾಡಿ ನನ್ನ ಇಮೇಜ್ ಡೌನ್ ಮಾಡಲು ಯತ್ನಿಸುತ್ತಿದ್ದಾರೆ. ನನ್ನ ಉಸಿರು ಇರೋ ವರೆಗೂ ರಾಜಕಾರಣ ಮಾಡ್ತಿನಿ. ಮುಂದಿನ ಪೀಳಿಗೆಗೆ ನನ್ನ ತಮ್ಮನ ಮಗ ಅನೀಕೆತ ಇದ್ದಾನೆ ಎಂದರು.

Home add -Advt

ಸಿದ್ದರಾಮಯ್ಯ ಅವರು ಆಗ ಹೇಳಿದ್ರು ನನಗೆ ಮಂತ್ರಿ ಮಾಡೋ ಆಸೆಯಿದೆ ಎಂದು. ಆದ್ರೆ ಯೋಗ್ಯತೆ ಇರೋ ಚೀಫ್ ವಿಪ್ ಅಗತ್ಯ ವಿದೆ ಅಂತಾ ಹೇಳುತ್ತಿದ್ದರು.‌ ಸಮಯ ಬಂದಾಗ ಮಂತ್ರಿ ಮಾಡ್ತಿನಿ ಅಂತಾ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹೇಳಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆ ಗೆ 3 ಸಚಿವ ಸ್ಥಾನ ಕೇಳಿದ್ದೇವೆ. ಬಿಜೆಪಿ ಸರ್ಕಾರ ಇದ್ದಾಗ 4 ಮಂತ್ರಿ ಸ್ಥಾನ ಕೊಟ್ಟಿದ್ದರು. ನಾನು ಅಶೋಕ ಪಟ್ಟಣ ಅಂತಾ ಪ್ರಮಾಣ ವಚನ ಸ್ವೀಕರಿಸಿದ ಮೇಲೆಯೇ ಮಂತ್ರಿ ಸ್ಥಾನ ಕನ್ಫರ್ಮ್ ಅನ್ನಕೊಬೇಕು ಎಂದ ಪಟ್ಟಣ ತಿಳಿಸಿದರು.

ಸಿದ್ದರಾಮಯ್ಯ ಸತೀಶ್ ಜಾರಕಿಹೊಳಿ‌ ಸಂಬಂಧ ಹಾಳಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಕ್ರಿಯೆಟ್ ಮಾಡುತ್ತಿದ್ದೀರಿ. ಅವರಿಬ್ಬರೂ ಚೆನ್ನಾಗಿಯೇ ಇದ್ದಾರೆ. ನೀವೇ ಕೇಳಿ ಕೇಳಿ ಜಗಳ ಹಚ್ಚಿಸುತ್ತಿರಾ ಅನಿಸುತ್ತೆ. ಅವರವರ ಸಂಬಂಧ ನನಗೆ ಏನು ಗೊತ್ತಿಲ್ಲ. ಒಮ್ಮೊಮ್ಮೆ ನನ್ನ ಪಕ್ಕದಲ್ಲಿ ಇದ್ದರೂ ಮಾತನಾಡುವುದಿಲ್ಲ. ಕೆಲವೊಮ್ಮೆ ದೇಹ ಇಲ್ಲೇ ಇರುತ್ತೆ ತಲೆ ಎಲ್ಲಿಯೋ ಇರುತ್ತದೆ.‌ ಸಿದ್ದರಾಮಯ್ಯ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ. ಮನೆಯಲ್ಲಿ ಆರಾಮ ಇದ್ದಾರೆ. ಮುಂದಿನ ಚುನಾವಣೆಗೆ ತಯಾರಿ ಮಾಡುತ್ತಾರೆ ಎಂದರು.

Related Articles

Back to top button