Kannada NewsKarnataka NewsLatest

*ಬೆಂಗಳೂರು ಟು ತಿರುಪತಿ: ಸೈಕಲ್ ನಲ್ಲಿಯೇ ತಿರುಪತಿ ತಲುಪಿದ ಶಾಸಕ ಸುರೇಶ್ ಕುಮಾರ್*

ಪ್ರಗತಿವಾಹಿನಿ ಸುದ್ದಿ: ರಾಜಾಜಿನಗರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಕುಮಾರ್ ಬೆಂಗಳೂರಿನಿಂದ ತಿರುಪತಿಗೆ ಸೈಕಲ್​ನಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಗುರುವಾರ ಬೆಳಗಿನಜಾವ 4.30ಕ್ಕೆ ಬೆಂಗಳೂರಿನ ಬಸವೇಶ್ವರನಗರದಿಂದ ಸೈಕ್ಲಿಂಗ್ ಆರಂಭ ಮಾಡಿದ ಶಸಾಕ ಸುರೇಶ್ ಕುಮಾರ್ ಹಾಗೂ ಅವರ ಸ್ನೇಹಿತರು, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ತಿರುಪತಿ ತಲುಪಿದ್ದಾರೆ.

Home add -Advt

10 ಜನರ ತಂಡದ ಜೊತೆ ಸುರೇಶ್ ಕುಮಾರ್ ಸೈಕಲ್​ನಲ್ಲಿ ತೆರಳಿದ್ದು, ಈ ಟೀಂ ಸತತ 3ನೇ ಬಾರಿಗೆ ತಿರುಪತಿಗೆ ಸೈಕ್ಲಿಂಗ್ ಮಾಡಿದೆ. ಬಸವೇಶ್ವರದಿಂದ ರಾಜಾಜಿನಗರ ಒಂದನೇ ಬ್ಲಾಕ್, ಯಶವಂತಪುರ, ಬಿ ಇ ಎಲ್ ವೃತ್ತ, ಅವಲಳ್ಳಿ ಅರಣ್ಯ ಪ್ರದೇಶ, ರಾಜಾನುಕುಂಟೆ, ನಾಡಪ್ರಭು ಕೆಂಪೇಗೌಡ ವಿಮಾನ ನಿಲ್ದಾಣ, ದೇವನಹಳ್ಳಿ, ವಿಜಯಪುರ, ಕೈವಾರ, ಮದನಪಲ್ಲಿ, ಪೀಲೇರು ಮಾರ್ಗವಾಗಿ ಸಾಗಿ ತಿರುಪತಿ ತಲುಪಿದ್ದು, ನಿನ್ನೆ ರಾತ್ರಿ ಮದನಪಲ್ಲಿಯಲ್ಲಿ ವಾಸ್ತವ್ಯ ಹೂಡಿದ್ದೆವು. ಒಟ್ಟು 265 ಕಿ. ಮೀ ದೂರವನ್ನು 14.10 ಸೈಕ್ಲಿಂಗ್ ಗಂಟೆ ಸಮಯದಲ್ಲಿ ಪೂರೈಸಿರೋದಾಗಿ ಶಾಸಕರು ಮಾಹಿತಿ ಹಂಚಿಕೊಂಡಿದ್ದಾರೆ.

ಎರಡು ವರ್ಷದ ಹಿಂದೆ ಸುರೇಶ್ ಕುಮಾರ್ ಬೆಂಗಳೂರಿನಿಂದ ಧರ್ಮಸ್ಥಳ ಕ್ಷೇತ್ರಕ್ಕೆ ಸೈಕಲ್ ನಲ್ಲಿ ಪ್ರವಾಸ ಮಾಡಿ ಗಮನ ಸೆಳೆದಿದ್ದರು.

Related Articles

Back to top button