Belagavi NewsBelgaum NewsKannada NewsKarnataka NewsLatestPolitics

*ಪಕ್ಷದ ಬಲಕ್ಕಾಗಿ ಉಪಚುನಾವಣೆ ಗೆಲ್ಲುವುದು ಅನಿವಾರ್ಯ: ಸಚಿವ ಸತೀಶ್‌ ಜಾರಕಿಹೊಳಿ*

ಉಮೇಶ ಮೇಟಿ ನೂರಕ್ಕೆ ನೂರರಷ್ಟು ಗೆದ್ದೆ ಗೆಲ್ಲುತ್ತಾರೆ- ದಾವಣಗೆರೆಯಲ್ಲಿ ಅಲ್ಪಸಂಖ್ಯಾತ ಸಮಾಜಕ್ಕೆ ಮುಂದಿನ ದಿನಗಳಲ್ಲಿ ನ್ಯಾಯ ಒದಗಿಸುವ ಕೆಲಸ

ಪ್ರಗತಿವಾಹಿನಿ ಸುದ್ದಿ: ಬಾಗಲಕೋಟೆ ಉಪಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ಉಮೇಶ ಮೇಟಿ ಗೆದ್ದೆ ಗೆಲ್ಲುತ್ತಾರೆ, ಅದರಲ್ಲಿ ಯಾವುದೇ ಸಂದೇಹ ಬೇಡ, ಆದರೆ ಎಷ್ಟು ಅಂತರದಿಂದ ಗೆಲ್ಲುತ್ತಾರೆಂದು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲವೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಕ್ಷೇತ್ರವನ್ನು ಮೊತ್ತೊಂದು ಕ್ಷೇತ್ರಕ್ಕೆ ಹೊಲಿಕೆ ಮಾಡಲು ಆಗುವುದಿಲ್ಲ. ಶಿಗ್ಗಾಂವಿ ಗೆದ್ದ ಹಾಗೆ ಬಾಗಲಕೋಟೆ ಗೆಲ್ಲುತ್ತೇವೆ ಎನ್ನುವುದು ತಪ್ಪು. ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಕಾಲಿಟ್ಟ ನಂತರ ನಮಗೆ ಅಲ್ಲಿನ ಸಮಸ್ಯೆಗಳು ಕಂಡವು, ಮಾಜಿ ಸಚಿವ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ಸ್ಥಾನವನ್ನು ಮರಳಿ ಪಡೆಯುವುದು ಕಾಂಗ್ರೆಸ್‌ಗೆ ಅತ್ಯಂತ ಮುಖ್ಯವಾಗಿತ್ತು. ಇದು ಕೇವಲ ಒಂದು ಉಪಚುನಾವಣೆಯಲ್ಲ, ಬದಲಿಗೆ ಪಕ್ಷದ ಬಲವನ್ನು ಸಾಬೀತುಪಡಿಸುವ ವೇದಿಕೆ ಎಂದು ಅವರು ಪ್ರತಿಪಾದಿಸಿದರು.

Home add -Advt

ದೊಡ್ಡ ದೊಡ್ಡ ಸಭೆ ಮಾಡಿ ಐವತ್ತು ಸಾವಿರ ಅಥವಾ ಒಂದು ಲಕ್ಷ ಜನಸಂಖ್ಯೆ ಸೇರಿದರೆ ಚುನಾವಣೆ ಗೆಲ್ಲುತ್ತೇವೆ ಎಂದು ಅನ್ನುಕೊಳ್ಳುವುದು ತಪ್ಪು. ಬಾಗಲಕೋಟೆಯಲ್ಲಿ ತಳಮಟ್ಟದಲ್ಲಿ ಕಾರ್ಯಕರ್ಯತರನ್ನು ಒಗ್ಗೂಡಿಸಿ ಚುನುವಣೆ ಗೆಲ್ಲಲು ಪ್ರಯತ್ನಿಸಿದ್ದೇವೆ. ಬಾಗಲಕೋಟೆ, ದಾವಣಗೆರೆ ಎರಡು ನಮ್ಮ ಕ್ಷೇತ್ರಗಳಾಗಿದ್ದು, ಎರಡು ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಅನಿರ್ವಾಯತೆ ಇತ್ತು. ಏಕೆಂದರೆ ಎರಡಲ್ಲಿ ಒಂದು ಕ್ಷೇತ್ರವನ್ನು ಗೆಲ್ಲದಿದ್ದರೆ ಬಿಜೆಪಿಯವರು ನಮ್ಮನ್ನು ಎರಡು ವರ್ಷ ನಿದ್ದೆ ಮಾಡಲು ಬಿಡುತ್ತಿರಲಿಲ್ಲ. ಅದಕ್ಕಾಗಿಯೇ ನಾವು, ನಮ್ಮ ನಾಯಕರು ಸೇರಿ ಚುನಾವಣೆ ಗೆಲ್ಲಲು ಆಸಕ್ತಿ ತೋರಿದ್ದೇವೆ ಎಂದರು.

ಇನ್ನು ದಾವಣಗೆರೆಯಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕೆಂಬ ಒತ್ತಾಯ, ಬಂಡಾಯದ ಕುರಿತು ಮಾತನಾಡಿದ ಅವರು, ದಾವಣಗೆರೆಯಲ್ಲಿ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ, ಅದೇ ಸಮಾಜಕ್ಕೆ ಟಿಕೆಟ್‌ ನೀಡಬೇಕಿತ್ತು. ಆದರೆ ದಾವಣಗೆರೆಯಲ್ಲಿ ಇಷ್ಟು ದಿನ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರೇ ಪ್ರತಿನಿಧಿಸುತ್ತಿದ್ದರು. ಅವರ ಅಗಲಿಕೆ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರಿಗೆ ಟಿಕೆಟ್‌ ನೀಡಲಾಗಿದೆ. ಅಲ್ಪಸಂಖ್ಯಾತ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಸಚಿವ ಎಸ್.ಎಸ್.‌ ಮಲ್ಲಿಕಾರ್ಜುನ ಅವರು ನ್ಯಾಯ ಒದಗಿಸುವ ಕೆಲಸ ಮಾಡುತ್ತಾರೆಂದು ಭರವಸೆ ನೀಡಿದರು.

ಅಹಿಂದ ಸಂಘಟನೆಯಿಂದ ಕಾಂಗ್ರೆಸ್‌ಗೆ ಆನೆಬಲ:ಕಾಂಗ್ರೆಸ್ ಪಕ್ಷಕ್ಕೆ ಯಾವಾಗಲೂ ಅಹಿಂದ ವರ್ಗಗಳೇ ಭದ್ರ ಬುನಾದಿ. ಈ ವರ್ಗಗಳನ್ನು ನಾವು ಎಷ್ಟು ಗಟ್ಟಿಗೊಳಿಸುತ್ತೇವೆಯೋ, ಅಷ್ಟು ಪಕ್ಷಕ್ಕೆ ಬಲ ಬರುತ್ತದೆ. ಬಾಗಲಕೋಟೆ ಉಪಚುನಾವಣೆಯಲ್ಲೂ ಅಹಿಂದ ಮತದಾರರು ಒಗ್ಗಟ್ಟಿನಿಂದ ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಅವರ ಕೈ ಹಿಡಿಯಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಗಲಿದೆ ಎಂಬ ರಾಜಕೀಯ ಚರ್ಚೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬದಲಾವಣೆ ಮಾಡಬೇಕಾಗಿದೆ. ಅದು ಅನಿರ್ವಾಯವೂ ಇದೆ. ಆದರೆ ಎಲ್ಲಾ ನಿರ್ಧಾರಗಳನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಪ್ರಚಾರಕ್ಕೆ ಆಗಮಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಯತ್ನಾಳ್ ಅವರು ಬಾಗಲಕೋಟೆಗೆ ಪ್ರಚಾರಕ್ಕೆ ಬರುತ್ತಿರುವುದು ಬಿಜೆಪಿಯ ಆಂತರಿಕ ವಿಷಯ. ಅವರು ಯಾರ ಪರ ಪ್ರಚಾರ ಮಾಡುತ್ತಾರೆ ಅಥವಾ ಮಾಡುವುದಿಲ್ಲ ಎಂಬುದು ನಮಗೆ ಮುಖ್ಯವಲ್ಲ ಎಂದರು.

ಕೇಂದ್ರದಿಂದ ಅನುದಾನ ಕಡಿತದ ಆರೋಪ: ಪ್ರತಿ ಮನೆಗೆ ಕುಡಿಯುವ ನೀರು ನೀಡುವ ಜಲ್‌ ಜೀವನ ಮಿಷನ್‌ ಯೋಜನೆಗೆ ಕೇಂದ್ರದಿಂದ ಬರಬೇಕಾದ ಪಾಲನ್ನು ತಡೆಹಿಡಿಯಲಾಗಿದೆ. ರಾಜ್ಯಕ್ಕೆ ಹಂಚಿಕೆಯಾದ ಅನುದಾನದಲ್ಲಿ ಅರ್ಧದಷ್ಟು ಮಾತ್ರ ಬಿಡುಗಡೆಯಾಗಿದೆ. ಗ್ರಾಮೀಣ ಭಾಗದ ಪ್ರಮುಖ ಯೋಜನೆಗಳಾದ ಜಲ್‌ ಜೀವನ ಮಿಷನ್‌ ಮತ್ತು ನರೇಗಾ ಅಡಿಯಲ್ಲಿ ಬರಬೇಕಾದ ಸಾವಿರಾರು ಕೋಟಿ ರೂಪಾಯಿ ಬಾಕಿ ಹಣವನ್ನು ಕೇಂದ್ರವು ಬಿಡುಗಡೆ ಮಾಡಿಲ್ಲ. ಗ್ರಾಮೀಣ ಭಾಗದ ಬಡ ಜನರಿಗೆ ಉದ್ಯೋಗ ನೀಡುವ ನರೇಗಾ ಯೋಜನೆಯ ಕೂಲಿ ಹಣ ಮತ್ತು ಕಾಮಗಾರಿಗಳ ಸಾಮಗ್ರಿ ಬಾಕಿ ಹಣವನ್ನು ಕೇಂದ್ರವು ಸಕಾಲಕ್ಕೆ ನೀಡುತ್ತಿಲ್ಲ. ಇದರಿಂದ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುತ್ತಿದೆ ಎಂದು ಸಚಿವ ಸತೀಶ್‌ ಜಾರಕಿಹೊಳಿ ಅವರು ಇದೇ ವೇಳೆ ಕೇಂದ್ರ ಸರ್ಕಾರವನ್ನು ದೂರಿದರು.

ಒಳ ಮೀಸಲಾತಿ ಪರ ನಿಲುವು: ಒಳ ಮೀಸಲಾತಿ ಜಾರಿ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬದ್ಧತೆ ಇದೆ. ಆದರೆ, ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಅನ್ವಯ ರಾಜ್ಯ ಸರ್ಕಾರವು ದತ್ತಾಂಶಗಳನ್ನು ಸಂಗ್ರಹಿಸಿ, ಸಂವಿಧಾನಬದ್ಧವಾಗಿ ಇದನ್ನು ಜಾರಿಗೊಳಿಸಬೇಕಿದೆ. ನಾವು ಯಾವುದೋ ಒಂದು ಸಮುದಾಯದ ವಿರುದ್ಧವಿಲ್ಲ, ಎಲ್ಲರಿಗೂ ಸಮಪಾಲು ಸಿಗಬೇಕು ಎಂಬುದು ನಮ್ಮ ಆಶಯವಿದೆ ಎಂದು ಸಚಿವರು ತಿಳಿಸಿದರು.

ರಮೇಶ ಕತ್ತಿ ಹೇಳಿಕೆಗಳು ಕೇವಲ ಮೂರ್ನಾಕ್ಕೂ ಯೂಟ್ಯೂಬ್‌ಗೆ ಸೀಮಿತ: ರಮೇಶ ಕತ್ತಿ ಹೇಳುವುದು ಕೇವಲ ಮೂರು ಯೂಟ್ಯೂಬ್ ಚ್ಯಾನಲ್‌ನವರು ತೋರಿಸುವುದಕ್ಕಷ್ಟೇ ಸೀಮಿತ. ಅವರ ಮಾತುಗಳನ್ನು ಜನರು ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ, ಕೆಲವು ಯೂಟ್ಯೂಬ್ ಚ್ಯಾನಲ್‌ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಪರವಾಗಿ ದೊಡ್ಡ ಅಲೆ ಇರುವಂತೆ ಬಿಂಬಿಸಲಾಗುತ್ತಿದೆ. ಚುನಾವಣೆ ನಡೆಯುವುದು ಜನರ ಮಧ್ಯೆ, ಮೊಬೈಲ್ ಸ್ಕ್ರೀನ್ ಮೇಲಲ್ಲ. ಮೂರು-ನಾಲ್ಕು ಯೂಟ್ಯೂಬ್ ಚ್ಯಾನಲ್‌ಗಳು ಮಾಡುವ ಶಬ್ದದಿಂದ ಮತಗಳು ಬದಲಾಗುವುದಿಲ್ಲ ಎಂದು ರಮೇಶ ಕತ್ತಿ ಹೇಳಿಕೆಗಳಿಗೆ ಸಚಿವರು ತಿರುಗೇಟು ನೀಡಿದರು.

ಈ ಸಂದರ್ಭದಲ್ಲಿ ವಾಕರಸಾ, ಸಂಸ್ಥೆಯ ಉಪಾಧ್ಯಕ್ಷ ಸುನೀಲ್‌ ಹಣಮನ್ನವರ್‌, ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇತರರು ಇದ್ದರು.

Related Articles

Back to top button