Belagavi NewsBelgaum NewsKannada NewsKarnataka NewsNational

*ಏ.23 ರಿಂದ 15 ದಿನ ವಿದ್ಯುತ್ ವ್ಯತ್ಯಯ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುವಿಸಕಂನಿ ವತಿಯಿಂದ ನೂತನವಾಗಿ 11ಕೆ.ವಿ. ಮಾರ್ಗವನ್ನು ನಿರ್ಮಿಸುತ್ತಿರುವುದರಿಂದ ಹಾಗೂ ಇತರೆ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಏಪ್ರಿಲ್ 23, 2026 ರಿಂದ 15 ದಿನಗಳವರೆಗೆ ಪ್ರತಿದಿನ ಬೆಳಿಗ್ಗೆ 10 ಘಂಟೆಯಿಂದ ಸಂಜೆ 6 ಘಂಟೆಯವರೆಗೆ 110 ಕೆ.ವಿ. ಬೀಡಿ ಉಪಕೇಂದ್ರದಿಂದ ಸರಬರಾಜು ಆಗುವ ಬೀಡಿ, ರಾಮಾಪೂರ. ಸುರಪೂರ, ಗೋಲಿಹಳ್ಳಿ, ಭುರುಣಕಿ, ಕರಿಕಟ್ಟಿ, ಗಸ್ತೋಳ್ಳದಡ್ಡಿ, ಗಸೊಳ್ಳಿ, ಹೊಸೆಟ್ಟಿ, ಶಿವಾಜಿ ನಗರ, ಹಾಲಜುಂಜವಾಡ, ಚನ್ನಕೇಬೈಲ, ಸುರಪುರ ಕೆರವಾಡ, ಕಲೈಶ್ವರ ನಗರ, ಹಾಗೂ ಕಕ್ಕೇರಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್‌ಸೆಟ್‌ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹುವಿಸಕಂನಿ., ಬೆಳಗಾವಿ ಕಾ ಮತ್ತು ಪಾ ಗ್ರಾಮೀಣ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರರು(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button