Kannada NewsLatestNational

*ದೋಣಿ ದುರಂತ: ಎದೆಗಪ್ಪಿಕೊಂಡೆ ಪ್ರಾಣ ಬಿಟ್ಟಿ ತಾಯಿ ಮಗು*

ಪ್ರಗತಿವಾಹಿನಿ ಸುದ್ದಿ: ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣವಾದ ಬರ್ಗಿ ಅಣೆಕಟ್ಟಿನ ಹಿನ್ನೀರಿನಲ್ಲಿ ಜಲಕ್ರೀಡೆ ಮತ್ತು ಬೋಟಿಂಗ್‌ಗೆ ಹೋದಾಗ ಆಕಸ್ಮಿಕವಾಗಿ ದೋಣಿ ಮಗುಚಿ ಅವಘಡ ಸಂಭವಿಸಿದ್ದು, ತಾಯಿ ಮಗು ಎದೆಗಪ್ಪಿಕೊಂಡು ಮೃತಪಟ್ಟಿದ್ದಾರೆ.

ಈ ಸ್ಥಳದಲ್ಲಿದ್ದ ಪ್ರವಾಸಿಗರು ಮತ್ತು ಭದ್ರತಾ ಸಿಬ್ಬಂದಿ ಕೂಡಲೇ ರಕ್ಷಣೆಗೆ ಧಾವಿಸಿದರೂ ಸಹ ನೀರಿನ ಸೆಳೆತ ಹೆಚ್ಚಿದ್ದ ಕಾರಣ ಎಲ್ಲರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ. ದೋಣಿಯಲ್ಲಿದ್ದ ಇತರ ಸದಸ್ಯರನ್ನು ಸ್ಥಳೀಯರ ಸಹಾಯದಿಂದ ದಡಕ್ಕೆ ಸೇರಿಸಲಾಯಿತು. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ಪಡೆಗಳು ಆಗಮಿಸಿ ನಾಪತ್ತೆಯಾದವರಿಗಾಗಿ ತೀವ್ರ ಶೋಧ ನಡೆಸಿದರು.

Home add -Advt

ನೀರಿನಲ್ಲಿ ಮುಳುಗುತ್ತಿದ್ದವರನ್ನು ಉಳಿಸಿಕೊಳ್ಳಲು ನಡೆಸಿದ ಪ್ರಯತ್ನಗಳು ವಿಫಲವಾದಾಗ ದಡದಲ್ಲಿದ್ದ ಸಂಬಂಧಿಕರ ಗೋಳು ಅರಣ್ಯರೋದನವಾಗಿತ್ತು.

ಈ ಇಡೀ ದುರಂತದಲ್ಲಿ ಅತ್ಯಂತ ವಿಷಾದನೀಯ ಮತ್ತು ಗಂಭೀರವಾದ ಸಂಗತಿಯೆಂದರೆ, ದೋಣಿ ವಿಹಾರದ ವೇಳೆ ಕಡ್ಡಾಯವಾಗಿ ಪಾಲಿಸಬೇಕಿದ್ದ ಸುರಕ್ಷತಾ ಕ್ರಮಗಳ ಕೊರತೆ. ನೀರಿನಲ್ಲಿ ಮುಳುಗಿ ತಾಯಿ ಮತ್ತು ಕೇವಲ ಆರು ವರ್ಷದ ಪುಟ್ಟ ಬಾಲಕ ಮೃತಪಟ್ಟಿದೆ.

ತಾಯಿ ಮಗು ಎದೆಗಪ್ಪಿಕೊಂಡೆ ಪ್ರಾಣ ಬಿಟ್ಟಿದ್ದು, ಈ ಹೃದಯವಿದ್ರಾಹಕ ದೃಶ್ಯ ನೋಡಿ ಎಲ್ಲರು ಕಣ್ಣಿರು ಹಾಕಿದ್ದಾರೆ.‌ ಈ ಮೂಲಕ ಪ್ರವಾಸಿಗರ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎದ್ದಿದೆ.

Related Articles

Back to top button