CrimeKannada NewsKarnataka NewsNational

*ಸಚಿವ ಜಮೀರ್ ಮನೆಯಲ್ಲಿ 1 ಕೆಜಿ 200 ಗ್ರಾಂ ಚಿನ್ನ ಲೂಟಿ: ಇಬ್ಬರ ಬಂಧನ*

ಪ್ರಗತಿವಾಹಿನಿ ಸುದ್ದಿ: ಸಚಿವ ಜಮೀರ್ ಅಹ್ಮದ್ ಮನೆಯಲ್ಲಿ 1 ಕೆಜಿ 200 ಗ್ರಾಂ ಲೂಟಿ ಮಾಡಿದ್ದ  ಕಳ್ಳರನ್ನು ಬಂಧಿಸುವಲ್ಲಿ ಬೆಂಗಳೂರಿನ ಶಿವಾಜಿನಗರ ಪೊಲೀಸರು  ಯಶಸ್ವಿಯಾಗಿದ್ದಾರೆ.

ಅಮೀರ್ ಅಹ್ಮದ್, ಅವೀನ್ ಬಂಧಿತ ಆರೋಪಿಗಳು. ಸಚಿವ ಜಮೀರ್ ಮನೆಯಲ್ಲಿ ಕಳೆದ ಮೂರು ವರ್ಷದಿಂದ ಹಂತ ಹಂತವಾಗಿ ಕೋಟಿ ಮೌಲ್ಯದ ಚಿನ್ನಾಭರಣ ಎಗರಿಸಿದ್ದರು. ಸಚಿವ ಜಮೀರ್ ಆರೋಗ್ಯ ವಿಚಾರಿಸುವ ಸಲುವಾಗಿ ಪದೇ ಪದೇ ಮನೆಗೆ ಬರುತ್ತಿದ್ದ ಅಮೀರ್ 2023ರಿಂದ ನಿರಂತರವಾಗಿ 1 ಕೆಜಿ 200 ಗ್ರಾಂ ಚಿನ್ನಾಭರಣ ಎಗರಿಸಿದ್ದಾನೆ.

Home add -Advt

 ಜಮೀರ್ ಅಹ್ಮದ್ ತಾಯಿ ನೀಡಿದ ದೂರಿನ ಮೇರೆಗೆ ಶಿವಾಜಿನಗರ ಪೊಲೀಸರು ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.ಕದ್ದ ಚಿನ್ನದಿಂದ ಬಂದ ಹಣ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿ ಲಾಭಕ್ಕೆ ಪ್ಲ್ಯಾನ್ ಮಾಡಿದ್ದರು.

Related Articles

Back to top button