*ಹಿರಿಯ ಪತ್ರಕರ್ತ ಪ್ರಹ್ಲಾದ ಕುಳಲಿ ಅವರ ನಿಧನಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಂತಾಪ*

ಪ್ರಗತಿವಾಹಿನಿ ಸುದ್ದಿ: ಸುಮಾರು ಏಳು ದಶಕಗಳ ಕಾಲ ಪತ್ರಕರ್ತರಾಗಿ ದುಡಿದಿದ್ದ, ಹಲವಾರು ಸುದ್ದಿಸಂಸ್ಥೆಗಳ ಮುಖ್ಯಸ್ಥರಾಗಿ ಮುನ್ನಡೆಸಿದ್ದ, ಕಿರಿಯರಿಗೆ ಸದಾ ಮಾರ್ಗದರ್ಶಕರಾಗಿದ್ದ ಹಿರಿಯ ಪತ್ರಕರ್ತರಾದ ಪ್ರಹ್ಲಾದ ಕುಳಲಿ ಅವರ ನಿಧನಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದಾರೆ.
“ಗಾಂಧೀಜಿ ವಿಚಾರ ಧಾರೆಗಳ ಪ್ರತಿಪಾದಕರಾಗಿ ಮಾಧ್ಯಮ ಲೋಕದಲ್ಲಿಯೂ ಇದೇ ರೀತಿ ಕೆಲಸ ಮಾಡುತ್ತಿದ್ದರು. ಮಾಜಿ ಮುಖ್ಯಮಂತ್ರಿ ಆರ್ ಗುಂಡೂರಾವ್ ಅವರ ಮಾಧ್ಯಮ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಇವರ ವಿಶೇಷ ವರದಿಗಳು ಭಾರೀ ಜನಮನ್ನಣೆ ಗಳಿಸಿದ್ದವು. ವರದಿಗಾರರ ಕೂಟದ ಪ್ರಪ್ರಥಮ ಪ್ರಧಾನ ಕಾರ್ಯದರ್ಶಿ ಪತ್ರಕರ್ತರ ಸಂಘಟನೆಯ ಕೆಲಸದಲ್ಲೂ ತೊಡಗಿಸಿಕೊಂಡಿದ್ದರು. 4 ದಶಕಗಳ ಕಾಲ ಒಂದೇ ಪತ್ರಿಕೆಯಲ್ಲಿ ಕೆಲಸ ಮಾಡಿದ ಹೆಗ್ಗಳಿಕೆಗೆ ಇವರದ್ದು.
ಪ್ರಹ್ಲಾದ ಕುಳಲಿ ಅವರ ಅಗಲಿಕೆಯಿಂದ ಕನ್ನಡ ಪತ್ರಿಕೋದ್ಯಮ ವಿಚಾರವಂತ, ಸಮಾಜದ, ಜನಸಾಮಾನ್ಯರ ಪರವಾಗಿ ಕಾಳಜಿ ಹೊಂದಿದ್ದ ಮತ್ತು ಮೌಲ್ಯಾಧಾರಿತ ದನಿಯನ್ನು ಕಳೆದುಕೊಂಡಂತಾಗಿದೆ.ಮೃತರ ಆತ್ಮಕ್ಕೆ ಚಿರಶಾಂತಿ ಲಭಿಸಲಿ. ಅವರ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ ದೊರೆಯಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ” ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

