*ವೃತ್ತಿಯಾಗಿ ಡಿಸೈನ್ ಆಯ್ಕೆ : ಇಂದಿನ ವಿದ್ಯಾರ್ಥಿಗಳಿಗೆ ಆಕರ್ಷಕ ಕರಿಯರ್ ಮಾರ್ಗ*

ಇಂದಿನ ಕಾಲವು ನವೀನತೆ, ಸೌಂದರ್ಯ ದೃಷ್ಟಿ ಮತ್ತು ಬಳಕೆದಾರ ಅನುಭವ (User Experience)ಗಳಿಗೆ ಮಹತ್ವ ನೀಡುವ ಯುಗವಾಗಿದೆ. ಈ ಹಿನ್ನೆಲೆಯಲ್ಲಿ ಡಿಸೈನ್ ಕ್ಷೇತ್ರವು ವಿದ್ಯಾರ್ಥಿಗಳಿಗೆ ಅತ್ಯಂತ ಚುರುಕು ಹಾಗೂ ಆಕರ್ಷಕ ವೃತ್ತಿ ಆಯ್ಕೆಯಾಗಿ ಹೊರಹೊಮ್ಮಿದೆ. ಹಿಂದೆ ಕೇವಲ ಕಲಾ ಕ್ಷೇತ್ರಕ್ಕೆ ಸೀಮಿತವಾಗಿದ್ದ ಡಿಸೈನ್, ಇಂದು ತಂತ್ರಜ್ಞಾನ, ಆರೋಗ್ಯ ಸೇವೆ, ಫ್ಯಾಷನ್ ಮತ್ತು ನಗರಾಭಿವೃದ್ಧಿ ಸೇರಿದಂತೆ ಹಲವಾರು ಕ್ಷೇತ್ರಗಳಿಗೆ ವಿಸ್ತರಿಸಿದೆ. ತಮ್ಮ ಸೃಜನಶೀಲತೆ ಮತ್ತು ಅದರ ಪ್ರಾಯೋಗಿಕ ಪರಿಣಾಮಗಳ ನಡುವೆ ಸಮತೋಲನ ಸಾಧಿಸಲು ಬಯಸುವ ವಿದ್ಯಾರ್ಥಿಗಳಿಗೆ ಡಿಸೈನ್ ಶಿಕ್ಷಣವು ಭರವಸೆಯ ಮತ್ತು ಭವಿಷ್ಯಮುಖಿ ಮಾರ್ಗವಾಗಿದೆ.
ಬೆಳಗಾವಿಯ ಕೆ.ಎಲ್.ಎಸ್. ಜಿ.ಐ.ಟಿ. (KLS GIT) ನಲ್ಲಿ ಕಲಾ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗದ PU II (10+2) ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ 4 ವರ್ಷದ ಬ್ಯಾಚುಲರ್ ಆಫ್ ಡಿಸೈನ್ (B.Des) ಕೋರ್ಸ್ ಲಭ್ಯವಿದೆ.

*ಡಿಸೈನ್ ಕ್ಷೇತ್ರದಲ್ಲಿನ ಹೆಚ್ಚುತ್ತಿರುವ ಅವಕಾಶಗಳು*
ಡಿಜಿಟಲ್ ಪ್ಲಾಟ್ಫಾರ್ಮ್ಗಳು ಮತ್ತು ಸ್ಟಾರ್ಟ್ಅಪ ಗಳ ವೇಗದ ಬೆಳವಣಿಗೆಯೊಂದಿಗೆ ಕಂಪನಿಗಳು ತಮ್ಮ ವಿಭಿನ್ನತೆ ತೋರಿಸಲು ಡಿಸೈನ್ನಲ್ಲಿ ದೊಡ್ಡ ಮಟ್ಟದ ಹೂಡಿಕೆ ಮಾಡುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳಿಂದ ಹಿಡಿದು ಸಣ್ಣ ಉದ್ಯಮಗಳವರೆಗೂ ಉತ್ತಮ ಡಿಸೈನ್ ಗ್ರಾಹಕರ ತೃಪ್ತಿ ಮತ್ತು ಬ್ರ್ಯಾಂಡ್ ಮೌಲ್ಯವನ್ನು ಹೆಚ್ಚಿಸುತ್ತದೆ ಎಂಬ ಅರಿವು ಮೂಡಿದೆ. ಇದರ ಫಲವಾಗಿ IT, ಜಾಹೀರಾತು, ಇ-ಕಾಮರ್ಸ್, ಗೇಮಿಂಗ್ ಮತ್ತು ಮೀಡಿಯಾ ಕ್ಷೇತ್ರಗಳಲ್ಲಿ ಡಿಸೈನ್ ತಜ್ಞರಿಗೆ ಹೆಚ್ಚಿನ ಅವಕಾಶಗಳು ದೊರೆಯುತ್ತಿವೆ.
*ಹೊಂದಿಕೊಳ್ಳುವ ಮತ್ತು ಸೃಜನಾತ್ಮಕ ವೃತ್ತಿ*
ಡಿಸೈನ್ ಕ್ಷೇತ್ರದಲ್ಲಿ ವೃತ್ತಿ ಆಯ್ಕೆಗಳು ಬಹಳ ವೈವಿಧ್ಯಮಯವಾಗಿವೆ. ಪದವೀಧರರು ಖ್ಯಾತ ಕಂಪನಿಗಳಲ್ಲಿ ಕೆಲಸ ಮಾಡಬಹುದು, ಕ್ರಿಯೇಟಿವ್ ಏಜೆನ್ಸಿಗಳಲ್ಲಿ ಸೇರಬಹುದು ಅಥವಾ ಸ್ವತಂತ್ರವಾಗಿ ಫ್ರೀಲಾನ್ಸಿಂಗ ಹಾಗೂ ಉದ್ಯಮಶೀಲತೆಯನ್ನು ಆಯ್ಕೆ ಮಾಡಬಹುದು. ವರ್ಕ್ ಫ್ರಮ ಹೋಮ ಮತ್ತು ರಿಮೋಟ ವರ್ಕ್ ಅವಕಾಶಗಳು ಹೆಚ್ಚುತ್ತಿರುವುದರಿಂದ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುವ ಅವಕಾಶವೂ ಲಭ್ಯವಾಗಿದೆ.

*ಯಶಸ್ವಿ ಡಿಸೈನರ ಆಗಲು ಅಗತ್ಯ ಗುಣಗಳು*
ಸೃಜನಶೀಲತೆ ಮತ್ತು ಕಲ್ಪನೆಶಕ್ತಿ – ಹೊಸ ಆಲೋಚನೆಗಳನ್ನು ರೂಪಿಸುವ ಮತ್ತು ಚೌಕಟ್ಟಿನ ಹೊರಗೆ ಯೋಚಿಸುವ ಸಾಮರ್ಥ್ಯ
ಸಮಸ್ಯೆ ಪರಿಹಾರ ಕೌಶಲ್ಯ – ನೈಜ ಜೀವನದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಹಿಡಿಯುವ ಸಾಮರ್ಥ್ಯ
ಸೂಕ್ಷ್ಮ ಗಮನ – ಬಣ್ಣ, ಟೈಪೋಗ್ರಫಿ, ವಿನ್ಯಾಸದಂತಹ ಅಂಶಗಳ ಮೇಲೆ ಕಣ್ಣಿಟ್ಟಿರುವುದು
ಕುತೂಹಲ ಮತ್ತು ಕಲಿಯುವ ಮನೋಭಾವ – ಹೊಸ ಟ್ರೆಂಡ್ಗಳಿಗೆ ಹೊಂದಿಕೊಳ್ಳುವ ತಯಾರಿ
ಸಂವಹನ ಮತ್ತು ತಂಡ ಸಹಕಾರ ಕೌಶಲ್ಯ – ಆಲೋಚನೆಗಳನ್ನು ಸ್ಪಷ್ಟವಾಗಿ ಹಂಚಿಕೊಳ್ಳುವುದು ಮತ್ತು ಪ್ರತಿಕ್ರಿಯೆ ಸ್ವೀಕರಿಸುವುದು
*ಉತ್ತರ ಕರ್ನಾಟಕದಲ್ಲಿ ಡಿಸೈನ್ ಶಿಕ್ಷಣಕ್ಕೆ ಉತ್ತೇಜನ*
ಕರ್ನಾಟಕ ಲಾ ಸೊಸೈಟಿ (KLS) 1939ರಿಂದ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಾನೂನು, ವಾಣಿಜ್ಯ ಮತ್ತು ಎಂಜಿನಿಯರಿಂಗ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. 1979ರಲ್ಲಿ ಸ್ಥಾಪನೆಯಾದ ಕೆ.ಎಲ್.ಎಸ್. ಗೊಗಟೆ ಇನ್ಸ್ಟಿಟ್ಯೂಟ ಆಫ ಟೆಕ್ನಾಲಜಿ (GIT) ಇಂದು NAAC A+ ಮಾನ್ಯತೆಯೊಂದಿಗೆ ಸ್ವಾಯತ್ತ ಮತ್ತು ಪ್ರತಿಷ್ಠಿತ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.
ಈ ಸಂಸ್ಥೆಯ ಆರ್ಕಿಟೆಕ್ಚರ ವಿಭಾಗವು ಇತ್ತೀಚೆಗೆ ತನ್ನ ಬೆಳ್ಳಿಹಬ್ಬವನ್ನು ಆಚರಿಸಿದೆ. ಜೊತೆಗೆ ದಾಸೊಲ್ಟ್ ಸಿಸ್ಟಮ್ಸ್ ಸಹಯೋಗದಲ್ಲಿ Centre for Interdisciplinary Design and Innovation ಮೂಲಕ ಡಿಸೈನ್ ಮತ್ತು ತಂತ್ರಜ್ಞಾನಗಳ ಸಮನ್ವಯವನ್ನು ಸಾಧಿಸಲಾಗುತ್ತಿದೆ. ಆಧುನಿಕ ಪ್ರಯೋಗಾಲಯಗಳು, ಡಿಜಿಟಲ ಸ್ಟುಡಿಯೋಗಳು, ಗ್ರಂಥಾಲಯಗಳು ಮತ್ತು ಅನುಭವಸಂಪನ್ನ ಅಧ್ಯಾಪಕರ ಮಾರ್ಗದರ್ಶನದಿಂದ KLS GIT ಉತ್ತರ ಕರ್ನಾಟಕದಲ್ಲಿ ಡಿಸೈನ್ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮುತ್ತಿದೆ.
*ಡಿಸೈನ್ನ ವಿವಿಧ ಕ್ಷೇತ್ರಗಳು*
ಇಂಡಸ್ಟ್ರಿಯಲ ಡಿಸೈನ್ – ಉತ್ಪನ್ನ ವಿನ್ಯಾಸ, ವಾಹನೋದ್ಯಮ, ಎಲೆಕ್ಟ್ರಾನಿಕ್ಸ್
ಕಮ್ಯುನಿಕೇಶನ ಡಿಸೈನ್ – ಗ್ರಾಫಿಕ, ಬ್ರ್ಯಾಂಡಿಂಗ, UI/UX ವಿನ್ಯಾಸ
ಫ್ಯಾಷನ ಡಿಸೈನ್ – ಉಡುಪು, ಸ್ಟೈಲಿಂಗ, ಬ್ರ್ಯಾಂಡ ನಿರ್ಮಾಣ
ಲೈಫ್ಸ್ಟೈಲ ಮತ್ತು ಆಕ್ಸೆಸರಿ ಡಿಸೈನ್ – ಆಭರಣ, ಪಾದರಕ್ಷೆ, ಗೃಹ ಅಲಂಕಾರ
ಭಾರತದಲ್ಲಿ ಡಿಸೈನ್ ಶಿಕ್ಷಣದ ಅವಕಾಶಗಳು
ಭಾರತದಲ್ಲಿ ನ್ಯಾಷನಲ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ (NID) ಮತ್ತು IITಗಳ ಡಿಸೈನ್ ವಿಭಾಗಗಳು ಪ್ರಮುಖ ಸಂಸ್ಥೆಗಳಾಗಿವೆ. ಸೃಷ್ಟಿ ಮಣಿಪಾಲ ಇನ್ಸ್ಟಿಟ್ಯೂಟ್ ಇಂತಹ ಖಾಸಗಿ ಸಂಸ್ಥೆಗಳೂ ಮಹತ್ವದ ಪಾತ್ರ ವಹಿಸುತ್ತಿವೆ. ಕರ್ನಾಟಕ, ವಿಶೇಷವಾಗಿ ಬೆಂಗಳೂರು, ಡಿಸೈನ್ ಶಿಕ್ಷಣ ಮತ್ತು ಸ್ಟಾರ್ಟ್ಅಪ ಗಳ ಪ್ರಮುಖ ಕೇಂದ್ರವಾಗಿದೆ.

*ಡಿಸೈನ್ : ಕೇವಲ ಕಲೆ ಅಲ್ಲ, ಒಂದು ಚಿಂತನೆ*
ಡಿಸೈನ್ ಎಂದರೆ ಕೇವಲ ಆಕರ್ಷಕ ವಸ್ತುಗಳನ್ನು ಸೃಷ್ಟಿಸುವುದಲ್ಲ, ಅದು ಸಮಸ್ಯೆ ಪರಿಹಾರವಾಗಿದೆ. ಮೊಬೈಲ ಆಪ್ಸ್ ಗಳಿಂದ ಹಿಡಿದು ದೀರ್ಘಕಾಲೀನ ಉತ್ಪನ್ನಗಳವರೆಗೆ ಮತ್ತು ಬ್ರ್ಯಾಂಡ ಗುರುತಿನ ನಿರ್ಮಾಣದವರೆಗೆ ಡಿಸೈನರ್ಗಳು ಮಹತ್ವದ ಪಾತ್ರ ವಹಿಸುತ್ತಾರೆ. ಈ ಕ್ಷೇತ್ರದಲ್ಲಿ ತಂತ್ರಜ್ಞಾನ, ಮನೋವಿಜ್ಞಾನ, ವ್ಯವಹಾರ ಮತ್ತು ಕಲೆಗಳ ಸಂಯೋಜನೆ ಇದೆ.
*IIT ಬಾಂಬೆ ಅನುಭವ: ಜೀವನ ಬದಲಿಸಿದ ಕ್ಷಣ*
1978ರಲ್ಲಿ M.Tech (Power Electronics)ಗಾಗಿ IIT Bombayಗೆ ಪ್ರವೇಶ ಪಡೆದಾಗ, Industrial Design Centre (IDC)ಗೆ ಮಾಡಿದ ಒಂದು ಭೇಟಿ ನನ್ನ ವೃತ್ತಿಜೀವನದ ದಿಕ್ಕನ್ನು ಬದಲಿಸಿತು. ಅಲ್ಲಿ ಕಂಡ ಪ್ರಾಜೆಕ್ಟ್ಗಳು ನನ್ನನ್ನು ಡಿಸೈನ್ ಕಡೆಗೆ ಸೆಳೆದವು ಮತ್ತು ನಾನು Industrial Design ಅನ್ನು ಆಯ್ಕೆ ಮಾಡಿಕೊಂಡೆ. ಆ ಕ್ಷಣವೇ ನನ್ನ ಜೀವನವನ್ನು ಸಂಪೂರ್ಣವಾಗಿ ಬದಲಿಸಿತು.
*ಮೆಂಟರ ಆಗಿ ನನ್ನ ಪಾತ್ರ*
40ಕ್ಕೂ ಹೆಚ್ಚು ವರ್ಷಗಳ ಅನುಭವದೊಂದಿಗೆ Tata Group, Hawkins Cookers ಮತ್ತು Mattel Toys ಮುಂತಾದ ಸಂಸ್ಥೆಗಳಲ್ಲಿ ಕೆಲಸ ಮಾಡುವ ಅವಕಾಶ ನನಗೆ ದೊರಕಿದೆ. ಈ ಅನುಭವವನ್ನು ನಾನು KLS GIT ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತೇನೆ. ನನ್ನ ಉದ್ದೇಶ ವಿದ್ಯಾರ್ಥಿಗಳನ್ನು ಕೇವಲ ತಾಂತ್ರಿಕವಾಗಿ ಮಾತ್ರವಲ್ಲ, ಉದ್ಯಮಕ್ಕೆ ಸಿದ್ಧರಾಗುವಂತೆ, ಚಿಂತನೆಶೀಲ ಮತ್ತು ಹೊಣೆಗಾರಿಕೆಯುತ ಡಿಸೈನರ್ಗಳಾಗಿ ರೂಪಿಸುವುದು.
*ಲೇಖಕರು : ಶ್ರೀ ಜಿ.ಡಿ. ವೇರ್ಣೆಕರ* (ಲೇಖನದಲ್ಲಿರುವ ಚಿತ್ರಗಳು ಅವರ ಕೈಗಾರಿಕಾ ಮತ್ತು ಶೈಕ್ಷಣಿಕ ಅನುಭವದ ಅವಧಿಯಲ್ಲಿ ನಿರ್ಮಿಸಿದ ನಿಜವಾದ ಡಿಸೈನ್ ಕೃತಿಗಳಾಗಿವೆ.)




